ಕೋವಿಡ್ ಪರೀಕ್ಷೆ, ಲಸಿಕೆ ಮತ್ತು ಚಿಕಿತ್ಸೆ – ದಿವ್ಯಾಂಗರಿಗೆ ಆದ್ಯತೆ ಸ್ವಾಗತಾರ್ಹ

ಕಲಬುರಗಿ:ಎ.28: ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 25(1)(c) ಪ್ರಕಾರ ಅಂಗವಿಕಲರಿಗೆ ಸೇವೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ಕಡ್ಡಾಯಗೊಳಿಸಿರುತ್ತದೆ.

ಕೋವಿಡ್ ಪರೀಕ್ಷೆ, ವ್ಯಾಕ್ಸಿನೇಷನ್ ಮತ್ತು ಚಿಕಿತ್ಸೆಗಾಗಿ ದಿವ್ಯಾಂಗರಿಗಾಗಿ ವಿಶೇಷ ನಿಯಮ ಮತ್ತು ನಿಬಂಧನೆಗಳನ್ನು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು‌ ಮತ್ತು ರಾಜ್ಯ ಸರಕಾರದಿಂದ ಎಲ್ಲಾ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ಮತ್ತು ಆರೋಗ್ಯ ಸಂಸ್ಥೆಗಳಿಗೆ ಸೂಕ್ತವಾದ ಸೂಚನೆಗಳನ್ನು ನೀಡಬೇಕೆಂದು ಭಾರತ ಸರಕಾರದ ದಿವ್ಯಾಂಗರ ಸಬಲಿಕರಣ ಇಲಾಖೆ ಆದೇಶಿಸಿದೆ.

ದಿವ್ಯಾಂಗರು ವ್ಯಾಕ್ಸಿನ್ ಗಾಗಿ ಲಸಿಕಾ ಕೇಂದ್ರಗಳ ಮುಂದೆ ಸರತಿಸಾಲಿನಲ್ಲಿ ಕಾಯುವುದನ್ನು ಮತ್ತು ಚಿಕಿತ್ಸೆಗಾಗಿ ಅಲೆದಾಡುವುದನ್ನು ತಪ್ಪಿಸಲು ಆದ್ಯತೆಯ ಮೇರೆಗೆ ಪರಿಣಾಮಕಾರಿಯಾದ ಯೋಜನೆ ಮತ್ತು ಕಾರ್ಯವಿಧಾನಗಳನ್ನು ರೂಪಿಸಬೇಕೆಂದು ಎಲ್ಲಾ ಚಿಕಿತ್ಸಾ ಕೇಂದ್ರಗಳಿಗೆ ನಿರ್ದೇಶಿಸಿದ್ದು ಸ್ವಾಗತಾರ್ಹ ಕ್ರಮ ಎಂದು ಡಿಸೆಬಲ್ಡ ಹೆಲ್ಪಲೈನ್ ‌ಪೌಂಡೆಶನನ‌ ರಾಜ್ಯ ಸಂಯೋಜಕ ‌ಬಸವರಾಜ ಹೆಳವರ ಯಾಳಗಿ‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.