ಕೋವಿಡ್ ಪರೀಕ್ಷೆ: ಲಸಿಕಾಕರಣ ಚುರುಕು


ಲಕ್ಷ್ಮೇಶ್ವರ,ಎ.14: ಕೊರೋನಾ ವೈರಸ್ ಎರಡನೆಯ ಅಲೆ ಅಬ್ಬರಿಸುತ್ತಿದ್ದಂತೆ ಆರೋಗ್ಯ ಮತ್ತು ಪರೀಕ್ಷೆ ಕಲ್ಯಾಣ ಇಲಾಖೆ ಲಸಿಕೆ ಮತ್ತು ಟೆಸ್ಟ್ ಗಳನ್ನು ತೀವ್ರಗೊಳಿಸಿದೆ. ಲಕ್ಷ್ಮೇಶ್ವರ ಪಟ್ಟಣವೊಂದರಲ್ಲಿಯೇ 15 ಪ್ರಕರಣಗಳು ಮತ್ತು ಗ್ರಾಮಾಂತರದಲ್ಲಿ 16 ಪ್ರಕರಣಗಳು ಪತ್ತೆಯಾಗಿದ್ದು ಇದುವರೆಗೆ 31 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಇಲಾಖೆಯವರು ಪ್ರಮುಖ ಸ್ಥಳಗಳಲ್ಲಿ ಕೋವಿಡ್ ಲಸಿಕೆ ಹಾಕಿಸಲು ಪಟ್ಟಣದ ಅಲ್ಲಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಕ್ಯಾಂಪು ಗಳನ್ನು ಮಾಡುತ್ತಿದ್ದಾರೆ. ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ರವಿವಾರ 68 ಜನರಿಗೆ ಕೋವಿಡ್ ಲಸಿಕೆ ಹಾಕಿದ್ದು ಅರವತ್ತು ಜನರಿಗೆ ಆರ್. ಟಿ. ಪಿ.ಸಿ.ಆರ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಶನಿವಾರವೂ ಸಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ದೂದನಾನಾ ಆಸಾರದಲ್ಲಿಯೂ ಕೋವಿಡ್ ಲಸಿಕೆಯನ್ನು ನೀಡಿದ್ದಾರೆ.