ಕೋವಿಡ್ ಪರೀಕ್ಷೆ ಅಮೆರಿಕಾ ಕಾರ್ಯ ಮೋದಿ ಪ್ರಶಂಸೆ

ವಾಷಿಂಗ್‌ಟನ್, ಸೆ. ೧೪-ಅಮೆರಿಕದಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿರುವುದಾಗಿ ಅಮೆರಿಕ ಅಧ್ಯಕ್ಷಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ನೆವಾಡ ಪ್ರಾಂತ್ಯದ ರೆನೊದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿ,ಟ್ರಂಪ್ ಭಾರತದ ಪ್ರಧಾನಿ ಮೋದಿ ಆವರು ನನಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ. ನಂಬರ್‌ನಲ್ಲಿ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಟ್ರಂಪ್,
ಕೊರೊನಾ ಪರೀಕ್ಷೆಯ ವಿಷಯದಲ್ಲಿ ನಾವು ಭಾರತಕ್ಕಿಂತಲೂ ಬಹಳ ಮುಂದಿದ್ದೇವೆ. ಆ ದೇಶವು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ.
ಭಾರತಕ್ಕಿಂತಲೂ ಹೆಚ್ಚು ಪರೀಕ್ಷಗೆಗಳನ್ನು ಅಮೇರಿಕದಲ್ಲಿ ಅಂದರೆ ೪.೪ ಕೋಟಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.ನನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಅಮೆರಿಕದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಿ ಅದು ಸ್ಥಳೀಯರಿಗೆ ಸಿಗುವಂತೆ ಮಾಡಲು ಶ್ರಮಿಸಿದ್ದೇನೆ. ಗಡಿ ಭದ್ರತೆಗೆ ಆದ್ಯತೆ ನೀಡಿದ್ದೇನೆ. ಸೇನೆಯ ಶಕ್ತಿಯನ್ನು ಹೆಚ್ಚಿಸಿದ್ದಷ್ಟೇ ಅಲ್ಲದೇ ಚೀನಾ ವಿರುದ್ಧ ಗಟ್ಟಿ ಧ್ವನಿಯನ್ನೂ ಎತ್ತಿದ್ದೇನೆ. ಹಿಂದೆ ಆಡಳಿತ ನಡೆಸಿದ್ದ ಯಾರೊಬ್ಬರೂ ಈ ಕೆಲಸ ಮಾಡಿರಲಿಲ್ಲ ಎಂದು ನುಡಿದಿದ್ದಾರೆ.
ಬೈಡನ್ ಗೆದ್ದರೆ ಅಮೆರಿಕವು ಎಡಪಂಥೀಯರಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ದೇಶವನ್ನು ಗಲಭೆಕೋರರ ಸುಪರ್ದಿಗೆ ನೀಡುವುದು ಬೈಡನ್ ತಂತ್ರ. ಒಂದೊಮ್ಮೆ ಬೈಡನ್ ಗೆದ್ದರೆ ಚೀನಾವೂ ಗೆದ್ದ ಹಾಗೆಯೇ. ಬೈಡನ್ ಗೆಲುವು, ಗಲಭೆಕೋರರ ಗೆಲುವೂ ಆಗಲಿದೆ. ಬೈಡನ್ ಜಯವು ಅರಾಜಕತಾವಾದಿಗಳು, ದೇಶದ ಧ್ವಜವನ್ನು ಸುಡುವವರು ಹೀಗೆ ಎಲ್ಲರ ಗೆಲುವೂ ಆಗಲಿದೆ’ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.