ಕೋವಿಡ್ ನಿರ್ವಾಹಣೆಗೆ ಕೈಜೊಡಿಸಿದ ಸಿಮೆಂಟ್ ಕಂಪನಿಗಳು

ಚಿಂಚೋಳಿ,ಏ.30- ಕೋವಿಡ್-19 ನಿರ್ವಾಹಣೆಗಾಗಿ ತಾಲೂಕ ಆರೋಗ್ಯ ಇಲಾಖೆ ಜೊತೆ ಖಾಸಗಿ ಸಿಮೆಂಟ್ ಕಂಪನಿಯವರು ಸಹಕರಿಸುತ್ತಿದ್ದಾರೆ ಚಿಂಚೋಳಿ ತಾಲೂಕಿನ ಚೆಟ್ಟಿನಾಡು ಸಿಮೆಂಟ್ ಕಂಪನಿ ಮತ್ತು ಸೇಡಂ ತಾಲೂಕಿನ ಕೊಡ್ಲಾ ಶ್ರೀ ಸಿಮೆಂಟ್ ಕಂಪನಿಗಳು ಚಿಂಚೋಳಿ ಆರೋಗ್ಯ ಇಲಾಖೆಗೆ ಸಹಕರಿಸುತ್ತಿದೆ ಸೇಡಂ ತಾಲೂಕಿನ ಕೊಡ್ಲಾ ಶ್ರೀ ಸಿಮೆಂಟ್ ಕಂಪನಿಯವರು ಆಕ್ಸಿಜನ್ ಪ್ರತಿದಿನ ಅವರು ನೋಡುತ್ತಿದ್ದಾರೆ ಚಿಂಚೋಳಿ ತಾಲೂಕಿನ ಚೆಟ್ಟಿನಾಡು ಕಂಪನಿಯವರು ಆಕ್ಸಿಜನ್ ತರಲು ವಾಹನವನ್ನು ನೀಡಿದ್ದಾರೆ ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫಾರ್ ಅವರು ಇಂದಿಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಈ ವಿಷಯ ಹಂಚಿಕೊಂಡ ಅವರು, ಚಿಂಚೋಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿದ್ದು, ಇಲ್ಲಿನ ಜನರಿಗೆ ವೇಗವಾಗಿ ಹರಡುತ್ತಿದದೆ. ಇಲ್ಲಿನ ಚಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಚಿಂಚೋಳಿ ಆಸ್ಪತ್ರೆಯಿಂದ ಪ್ರತಿದಿನ ಸೇಡಂ ತಾಲೂಕಿನ ಕೊಡ್ಲಾ ಶ್ರೀ ಸಿಮೆಂಟ್ ಕಂಪನಿಗೆ ಹೋಗಿ ಆಕ್ಸಿಜನ್ ತರುತ್ತಾರೆ ಅದರಿಂದ ಚಿಂಚೋಳಿ ತಾಲೂಕಿನ ಕೊರೋನ ರೋಗಿಗಳಿಗೆ ಬಹಳಷ್ಟು ಅನುಕೂಲ ಆಗುತ್ತಿದೆ ಹಾಗೂ ಚಿಂಚೋಳಿ ತಾಲೂಕಿನ ಜನರು ಕೋವಿಡ 19 ಸೋಂಕು ಹೆಚ್ಚಾಗಿದ್ದ ಕಾರಣ ತಾಲೂಕಿನ ಜನರು ಆದಷ್ಟು ಜಾಗೃತವಾಗಿರಬೇಕು ಕೋವಿಡ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಕರೆ ನೀಡಿದರು.
ನಿಯಮ ಪಾಲಿಸದೇ ಹೊರಗಡೆ ಓಡಾಡಿದ್ದಲ್ಲಿ ಕೋರೊನಾ ಸೋಂಕು ಅಂಟುತ್ತದೆ, ಹೀಗಾಗಿ ಮನೆಯಲ್ಲೇ ಇದ್ದು ಕೊರೋನಾ ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಕೈಜೋಡಿಸಿ ಮನವಿ ಮಾಡಿದರು.