ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಶಾಸಕ ಭೀಮನಾಯ್ಕ

ಕೊಟ್ಟೂರು ಜೂ 11: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕೋವಿಡ್ ಲಸಿಕೆ ನೀಡುವಲ್ಲಿಯು ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಸ್ ಭೀಮನಾಯ್ಕ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ 18-45 ವಯಸ್ಸಿನವರು ಸುಮಾರು 1.30000 ಸಾವಿರ ಜನರಿದ್ದು ಕೆವಲ 3000 ಸಾವಿರ ಜನರಿಗೆ ಮಾತ್ರ ಲಸಿಕೆ ದೊರೆತಿದೆ ಪ್ರಧಾನ ಮಂತ್ರಿಗಳು ಎಲ್ಲರಿಗೂ ಲಸಿಕೆ ಕೊಡಲಿದ್ದೇವೆ ಎನ್ನುತ್ತಿದ್ದಾರೆ ಲಸಿಕೆ ಮಾತ್ರ ನೀಡುತ್ತಿಲ್ಲ ಎಂದರು.
ಶಾಸಕರ ಅನುಧಾನದಲ್ಲಿ 1 ಕೋಟಿ ರೂಪಾಯಿಗಳನ್ನು ಲಸಿಕೆಗಾಗಿ ನಾವು ನೀಡಲಿದ್ದೆವೆ, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರು ಸಹ ಲಸಿಕೆಯಿಂದ ವಂಚಿತರಾಗಬಾರದು ನಾಳೆ ಅಥವಾ ನಾಡಿದ್ದು ಜಿಲ್ಲಾಧಿಕಾರಿಗಳ ಭೇಟಿ ಮಾಡಿಲಿದ್ದೆನೆ ಎಂದ ಅವರು, ನಮ್ಮ ಅಧ್ಯಕ್ಷರ ಸಮ್ಮುಖದಲ್ಲಿ ನಮ್ಮ ಶಾಸಕರೆಲ್ಲ ಸೇರಿ 190 ಕೋಟಿ ಲಸಿಕೆಗೆ ನೀಡಲಿದ್ದು, ಕೆಪಿಸಿಸಿ ಕಡೆಯಿಂದ 10 ಕೋಟಿ ಸೇರಿ ಒಟ್ಟು 200 ಕೋಟಿ ಲಸಿಕೆಗಾಗಿ ಕೊಡಲು ತಿರ್ಮಾನಿಸಿದ್ದೇವೆ ಎಂದರು.
ಗಂಗಮ್ಮನಹಳ್ಳಿ -ಕೊಟ್ಟೂರು ರಸ್ತೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 10 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭೀವೃದ್ದಿ ಯೋಜನೆಯಡಿ ಅನುಧಾನ ದೊರೆತ್ತಿದ್ದು, ಟೆಂಡರ್ ಹಂತದಲ್ಲಿದೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಕಾಮಾಗಾರಿಗಳಿಗೆ ಅನುಮೋದನೆ ಸಿಗುತ್ತಿಲ್ಲ, ನಮ್ಮ ಅಭಿವೃದ್ದಿ ಕಾಮಾಗಾರಿಗಳು ಹಿನ್ನಡೆಯಾಗಿವೆ ಎಂದು ಕಿಡಿ ಕಾರಿದರು.