ಕೋವಿಡ್ ನಿರ್ವಹಣೆಯಲ್ಲಿ ಕಂಕಣಬದ್ಧರಾಗಿ ಕೆಲಸ ನಿರ್ವಹಿಸಿ: ಶರಣು ಸಲಗಾರ

ಬಸವಕಲ್ಯಾಣ:ಮೇ.4: ‘ಕೋವಿಡ್ ನಿಯಂತ್ರಣಕ್ಕಾಗಿ ಅಧಿಕಾರಿಗಳು ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು. ದಿನದ 24 ಗಂಟೆಯೂ ಸೇವೆಗೆ ಸಿದ್ಧರಿದ್ದರೆ ಸೋಂಕು ಹರಡುವಿಕೆ ತಡೆಯುವುದು ಸುಲಭ ಸಾಧ್ಯ’ ಎಂದು ಶಾಸಕ ಶರಣು ಸಲಗರ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಸಂಕಟ ಅನುಭವಿಸಿದ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಧಾನ್ಯ ವಿತರಿಸಿದ್ದೇನೆ. ಈ ವಿಧಾನಸಭಾ ಕ್ಷೇತ್ರದ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ 50 ಸಾವಿರ ಜನರಿಗೆ ಅಕ್ಕಿ, ಬೆಳೆ ನೀಡಿದ್ದೇನೆ. ಹೀಗಾಗಿ ಏನೂ ಇಲ್ಲದಿದ್ದಾಗ ಇಷ್ಟು ಕೆಲಸ ಮಾಡಿದ್ದಾರೆ.