ಕೋವಿಡ್ ನಿರ್ವಹಣಾ ಸಭೆ

ಹೊನ್ನಾಳಿ.ಮೇ.೫;  ಅವಳಿ ತಾಲೂಕಿನ ಅಧಿಕಾರಿಗಳ ಕೋವಿಡ್ ನಿರ್ವಹಣಾ ಸಭೆಯನ್ನು ಹೊನ್ನಾಳಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.ಸಭೆಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೇವಲ ನೌಕರಿ ಎಂದು ಭಾವಿಸದೆ ಸೇವೆಯೆಂದು ತಿಳಿದು ಕರ್ತವ್ಯ ನಿರ್ವಹಿಸಬೇಕು. ನಿರ್ಲಕ್ಷ ಮಾಡುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೊರ ಜಿಲ್ಲೆಯಲ್ಲಿರುವ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆಯ ಸಹಾಯಕ್ಕಾಗಿ  ಆಪ್ತ ಸಹಾಯಕರ ತಂಡ ರಚಿಸಿ ಸಹಾಯವಾಣಿಯನ್ನು ರಚಿಸಲಾಗಿದೆ., ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು. Attachments area