ಕೋವಿಡ್ ನಿಯಮ ಪಾಲಿಸಿ : ಸಂಕನೂರ

ಧಾರವಾಡ, ಏ24: ಅತಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಸೋಂಕನ್ನು ಕಟ್ಟಿಹಾಕಲು ವೀಕೆಂಡ್ ಕಪ್ರ್ಯೂ ಹಾಗೂ ಸೆಮಿ ಲಾಕ್‍ಡೌನ್ ರೀತಿಯ ಮಾರ್ಗಸೂಚಿಗಳನ್ನು ಸರಕಾರ ಹೊರಡಿಸಿದ್ದು ಸಾರ್ವಜನಿಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರಕಾರದ ಜೊತೆಗೆ ಸಹಕರಿಸಲು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೊರೊನಾ ಸೋಂಕಿನ ಎರಡನೇ ಅಲೆ ಇಡೀ ದೇಶ-ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಅನಿವಾರ್ಯವಾಗಿ ಏಪ್ರಿಲ್ 21 ರಿಂದ ಮೇ 4ರವರೆಗೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ವಿಶೇಷವಾಗಿ 57 ಗಂಟೆಗಳ ಕಾಲ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ವೀಕೆಂಡ್ ಕಪ್ರ್ಯೂ ಜಾರಿಯಾಗಿರುವುದು. ಆದ್ದರಿಂದ ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಗೆಬಾರದೇ ಕೊವಡ್ ನಿಯಂತ್ರಣದ 3 ಮಂತ್ರಗಳಾಗಿರುವ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಜರ್ ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೇ 1 ರಿಂದ 18 ವರ್ಷದಿಂದ 44 ವರ್ಷದ ಒಳಗಿನವರು ಲಸಿಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಈ ಹಿನ್ನೆಲೆಯಲ್ಲಿ ಏಪ್ರಿಲ್ 28 ರಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕಾರಣ ಆನ್‍ಲೈನಲ್ಲಿ ಯುವ ಜನತೆಗೆ ನೋಂದಣಿ ಮಾಡಿಸಿಕೊಳ್ಳಲು ಸಂಕನೂರ ವಿನಂತಿಸಿಕೊಂಡಿದ್ದಾರೆ.