
ಜಗಳೂರು.ಡಿ.೨೨ : ತಾಲೂಕಿನ ಪ್ರತಿಯೋಂದು ಮತಗಟ್ಟೆಗಳಲ್ಲಿ ಕೋವಿಡ್ ನಿಯಮಗಳನ್ನುಪಾಲಿಸಿ ಮತದಾನ ಪ್ರಕ್ರಿಯೆ ನಡೆಯಲು ಸಕಾಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಚುನಾವಣೆಯ ತಾಲೂಕು ನೋಡೆಲ್ ಅಧಿಕಾರಿ ನಜ್ಮಾ ಹೇಳಿದರು. ಪಟ್ಟಣದ ಸರಕಾರ ಪೌಢ ಶಾಲಾ ಆವರಣದಲ್ಲಿ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್, ಬ್ಯಾಲೆಟ್ ಪೇಪರ್ ಸೇರಿದಂತೆ ಚುನಾವಣಾ ಸಾಮಾಗ್ರಿಗಳ ಕಿಟ್ ವಿತರಿಸಿ ನಂತರ ಅವರು ಮಾತನಾಡಿದರು ತಾಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಿAದ 397 ಸ್ಥಾನಗಳಿದ್ದು ಇದರಲ್ಲಿ 100 ಸ್ಥಾನಗಳೂ ಈಗಾಗಲೇ ಆವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 297 ಸ್ಥಾಗಳಿಗೆ ಚುನಾವಣೆ ನಡೆಯಲಿದೆ 1ಲಕ್ಷದ 8 ಸಾವಿರದ 235 ಮತದಾರರಿದ್ದಾರೆ. ಒಟ್ಟು 172 ಮತಗಟ್ಟೆ ಗಳನ್ನು ತೆರೆಯಲಾಗಿದ್ದು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಡಿಗ್ರೂಪ್, ಪೋಲಿಸ್ ಪೇದೆ, ಸೇರಿದಂತೆ ಒಟ್ಟು 5 ಜನ ಒಂದೊಂದು ಮತಗಟ್ಟೆಯಲ್ಲಿ ಕಾರ್ಯನಿವಾಹಿಸುತ್ತಿದ್ದು ಒಟ್ಟು 860 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ, ರಾತ್ರಿ ಮತಗಟ್ಟೆ ಕೇಂದ್ರದಲ್ಲಿ ವಾಸ್ತವ್ಯ ಊಡಬೇಕಾಗಿದ್ದು ಅವರಿಗೆ ಊಟ, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಲಾಗಿದೆ ಮತ್ತು ಕೇಂದ್ರಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಬೇಖು ಎಂದು ಹೇಳಿದರು. ಈ ಸಂದರ್ಭದಲ್ಲಿ ಇಓ. ಮಲ್ಲಾನಾಯ್ಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸಲು, ಸಿಡಿಪಿಓ ಬಿರಾದಾರ, ಸೇರಿದಂತೆ ಮತ್ತಿತರರು ಹಾಜರಿದ್ದರು.