ಕೋವಿಡ್ ನಿಯಮ ಪಾಲಿಸಿ: ಕಡಗಂಚಿ ಶ್ರೀಗಳು

ಕಲಬುರಗಿ.ಏ.17:ಕೊರೋನಾ ಸೊಂಕಿನಿಂದ ಕಳೆದ ಒಂದು ವರ್ಷಗಳಕಾಲ ಸಾವುನೋವುಗಳಾಗಿರುವುದನ್ನು ಮರೆಯುವಂತಿಲ್ಲ, ಕೋವಿಡ 19ರ ಅಲೆಯು ಈಗ ಮತ್ತೆ ಎರಡನೇ ಅಲೆಯಾಗಿ ಹರುಡುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಜನರ ನಿರ್ಲಕ್ಷವೇ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಆದ್ದರಿಂದ ಜನತೆ ಮೈಮರೆಯದೇ ತಪ್ಪದೆ ಪರಸ್ಪರ ಒಂದು ಮೀಟರ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸೈನಿಟೈಜರ್ ಬಳಸುವುದು ಮುಂತಾದ ಕೋವಿಡ್ ನಿಯಮಗಳನ್ನು ಪರಿಪಾಲಿಸುವುದು ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.