ಕೋವಿಡ್ ನಿಯಮ ಪಾಲನೆ ಮಾಡಿ : ಶಾಸಕ ಮುನೇನಕೋಪ್ಪ

ನವಲಗುಂದ , ಏ23 : ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಬೇಕು , ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮಗಳನ್ನು ಜರುಗಿಸಬೇಕು . ಕೋವಿಡ್ ಸೋಂಕಿನ ಸರಪಳಿ ತುಂಡರಿಸಬೇಕು ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು .
ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಕೋವಿಡ್ ತಡೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು , ವಿಧಾನಸಭಾ ಕ್ಷೇತ್ರದಲ್ಲಿ 1.90 ಲಕ್ಷ ಜನಸಂಖ್ಯೆ ಇದೆ . ಅದರಲ್ಲಿ 17.62 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ . ತಾಲ್ಲೂಕಿನಲ್ಲಿ ಒಟ್ಟು 58 ಜನರಿಗೆ ಸೋಂಕು ದೃಡಪಟ್ಟಿದೆ . ಅದರಲ್ಲಿ 38 ಜನರು ಗುಣಮುಖರಾಗಿದ್ದಾರೆ . ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ . ಕಾರಣ ಯಾರು ಭಯಪಡುವ ಅವಶ್ಯಕತೆ ಇಲ್ಲ . ಲಸಿಕೆ ಪಡೆಯಲು ಹಿಂಜರಿಕೆ ಬೇಡ ಎಂದರು .
ತಾಲೂಕು ಆರೋಗ್ಯ ಅಧಿಕಾರಿ ಡಾ . ಹೊನ್ನಕೇರಿ ಮಾತನಾಡಿ , ನಿತ್ಯ 250 ಜನರಿಗೆ ಕರೋನಾ ಲಸಿಕೆ ನೀಡುತ್ತಿದ್ದೇವೆ . ಸಾರ್ವಜನಿಕರು ನಿರ್ಭೀತಿಯಿಂದ ಲಸಿಕೆ ಹಾಕಿಸಿಕೊಳ್ಳಬೇಕು . ಎಲ್ಲರೂ ಪರಸ್ಪರ ಅಂತರ ಪಾಲನೆ , ಕಡ್ಡಾಯವಾಗಿ ಮಾಸ್ಕ್ ಧರಿಸಿ ಕರೋನಾ ಹತೋಟಿಗೆ ತರಲು ಸಹಕರಿಸಬೇಕು ಎಂದರು .
ಗ್ರಾಮ ಸಮಿತಿ ರಚನೆ : ಗ್ರಾಮೀಣ , ಪ್ರದೇಶದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಲು ಪಂಚಾಯ್ತಿಗಳಿಗೊರಂತೆ ತಾಲೂಕುಮಟ್ಟದ ಅಧಿಕಾರಿಗಳ ಸಮಿತಿ ಮುನೇನಕೊಪ್ಪ ಯನ್ನು ರಚಿಸಿ ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವ ಮೂಲಕ ಲೋಕ ಪಸರಿಸದಂತೆ ಕ್ರಮ ಕ್ರಮ ಜರುಗಿಸಲು ಸೂಚಿಸಿ ದರು . ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆ ಗಳನ್ನು ಮೀಸಲಿಡಲಾಗಿದ್ದು ಇನ್ನು ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೊರೊನಾ ಕೇರ್ ಸೆಂಟರ್ ಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ತಾಲ್ಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಎಸ್ . ಎಂ.ಕಾಂಬಳೆ , ತಾಲ್ಲೂಕು ಆರೋಗ್ಯಾಧಿಕಾರಿ ಎಸ್.ಎಂ.ಹೊನಕೇರಿ ,
ನವಲಗುಂದ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ , ಅಣ್ಣಿಗೇರಿ ತಹಸೀಲ್ದಾರ ಕೊಟ್ರೇಶ್ ಗಾಳಿ , ತಾಪಂ ಇಒ ಎನ್.ಎಸ್.ಕಂಬಳಿ , ಪೆÇಲೀಸ್ ಅಧಿ ಕಾರಿಗಳಾದ ಸಿ.ಜೆ.ಮಠಪತಿ , ಜಯಪಾಲ ಪಾಟೀಲ್ , ಲೋಕೋಪಯೋಗಿ ಇಲಾಖೆಯ ಸಿದ್ದಾಪುರ, ಪುರಸಭೆ ಮುಖ್ಯಾಧಿಕಾರಿ ಎನ್.ಎಚ್.ಖುದಾನವರ , ಪುರಸಭೆ ಅಧ್ಯಕ್ಷ ಮಂಜು ಜಾಧವ, ಕಟಗಿ , ನಾನಾ ಇಲಾಖೆ ಅಧಿಕಾರಿಗಳು ಇದ್ದರು .