ಕೋವಿಡ್ ನಿಯಮ ಪಾಲನೆ – ಮನೆಯಲ್ಲೇ ರಂಜಾನ್ ಪ್ರಾರ್ಥನೆ.

ಕೂಡ್ಲಿಗಿ.ಮೇ. 14 :- ಸಹೋದರತೆ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಈದುಲ್ ಫಿತ್ರ್ (ರಂಜಾನ್ ) ಮೂವತ್ತು ದಿನಗಳ ವ್ರತಾಚರಣೆ ಮುಗಿಸಿ ಇಂದು ಈದ್ಗಾ ಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಬ್ಬಕ್ಕೆ ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ನಿಯಂತ್ರಣ ಹಾಕಲು ಸರ್ಕಾರ ಕೋವಿಡ್ ನಿಯಮ ಜಾರಿಗೆ ತಂದಿದ್ದು ಈ ನಿಯಮ ಪಾಲನೆಯಂತೆ ಮುಸ್ಲಿಂ ಬಾಂಧವರು ಈದ್ಗಾಕ್ಕೆ ತೆರಳದೆ ಅವರವರ ಮನೆಯೊಳಗೆ ಕುಟುಂಬ ಸಮೇತರಾಗಿ ರಂಜಾನ್ ಪ್ರಾರ್ಥನೆ ಸಲ್ಲಿಸಿದರು.
ಕಳೆದ ವರ್ಷದಿಂದ ಕೊರೋನಾ ಹೆಮ್ಮಾರಿ ಇಡೀ ಜಗತ್ತನ್ನು ಬುಗುರಿಯಂತೆ ಆಡಿಸಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದು ಕೂಲಿಯಿಂದ ನಿತ್ಯ ಬದುಕಿನ ಬಂಡಿ ಸಾಗಿಸುತ್ತಿದ್ದ ಬಡವರ ಜೀವನಕ್ಕೆ ಕಲ್ಲುಬಂಡೆ ಎಳೆದಂತಾಗಿದೆ ಕೂಲಿಕಾರ್ಮಿಕರ, ವಲಸೆ ಹೋದ ಕಾರ್ಮಿಕರ ಪಾಡಂತೂ ಹೇಳತೀರದಾಗಿದೆ ಓ ದೇವರೇ ಈ ಮಹಾಮಾರಿ ತೊಲಗುವಂತೆ ಮಾಡಿ ಎಲ್ಲರ ಬದುಕಿಗೆ ದಾರಿ ತೋರುವ ನೀನೇ ನಮ್ಮೆಲ್ಲರನ್ನೂ ಕಾಪಾಡಲು ಕೊರೋನಾದಿಂದ ನಮ್ಮೆಲ್ಲರನ್ನೂ ಮುಕ್ತಗೊಳಿಸು ಎಂದು ಪ್ರಾರ್ಥನೆ ಮಾಡಿರುವುದಾಗಿ ಮುಸ್ಲಿಂ ಬಂದವರು ತಿಳಿಸಿದರು.
ಇಂದು ಒಂದೇ ದಿನ ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ಕೋವಿಡ್ ನಿಯಮ ಪಾಲಿಸಿ ಪಟ್ಟಣದಲ್ಲಿ ಸರಳವಾಗಿ ಆಚರಿಸಿದರು.