ಕೋವಿಡ್ ನಿಯಮ ಕಡ್ಡಾಯ ಪಾಲನೆಗೆ ತಹಸಿಲ್ದಾರ ಕರೆ

ಚಿಂಚೋಳಿ,ಏ.27- ಇಲ್ಲಿನ ತಹಸಿಲ್ ಕಾರ್ಯಾಲಯದಲ್ಲಿ ನಡೆದ ಕೋವಿಡ್- 19 ಕುರಿತ ಸಭೆಯಲ್ಲಿ ಮಾತನಾಡಿದ ತಹಸಿಲ್ದಾರ ಅರುಣ ಕುಲಕರ್ಣಿ ಅವರು, ಸರ್ಕಾರ ಆದೇಶದಂತೆ 14 ದಿನ ಲಾಕ್ಡೌನ್ ಮಾಡಲಾಗಿದ್ದು ತಾಲೂಕಿನ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.
ಮಹಾಮಾರಿ ಕೋವಿಡ್ 19 ಸೋಂಕು ಹೆಚ್ಚಾಗುವುದರಿಂದ ಸರ್ಕಾರ ಆದೇಶವನ್ನು ಎಲ್ಲಾ ನಾಗರಿಕರು ಕೋವಿಡ್ ನಿಯಮವಳಿ ಹಾಗೂ ನಿಷೇದಾಜ್ಷೆಯನ್ನು ಪಾಲನೆ ಮಾಡಬೇಕು ಹೇಳಿದ ಅವರು, ಅಗತಯ ಕೆಲಸ ಇದ್ದರೆ ಮಾತ್ರ ಹೊರಗಡೆ ಬರಬೇಕು ಎಂದರು.
ಅನಗತ್ಯ ಓಡಾಟ ಬೇಡ, ಕೆಲಸ ಇಲ್ಲದಿದ್ದರೆ ಮನೆಯಲ್ಲೇ ಇದ್ದುಕೊಂಡು ಕೊರೊನಾ ಸೋಂಕು ಹರಡದಂತೆ ಕಾಪಾಡಿಕೊಳ್ಳಬೇಕು ಎಂದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ. ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳಾದ ಮುನೀರ್ ಅಹ್ಮದ್. ವಲಯ ಅರಣ್ಯ ಇಲಾಖೆ ಅಧಿಕಾರಿಗಳಾದ ಸಂಜುಕುಮಾರ ಚವ್ಹಾಣ. ಚಿಂಚೋಳಿಯ ಉಪ ವಿಭಾಗ ಜಿಲ್ಲಾ ಪಂಚಾಯತ ಅಧಿಕಾರಿಗಳಾದ ಮಹಮ್ಮದ ಹುಸೇನ್. ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರಭುಲಿಂಗ. ಸುಲೇಪೇಟ ಸಿಪಿಐ ಜಗದೀಶ ಕೆಜಿ. ಚಿಂಚೋಳಿಯ ಪಿಎ??? ಸಂತೋಷ್ ರಾಠೋಡ. ಚಿಂಚೋಳಿಯ ತಾಲೂಕ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಮಹಮ್ಮದ್ ಗಫಾರ. ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ನಾಗಶೆಟ್ಟಿ ಭದ್ರಶೆಟ್ಟಿ. ಗ್ರೇಡ್-2 ತಹಸಿಲ್ದಾರ ವೆಂಕಟೇಶ ದುಗ್ಗನ್. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾದ ಪದ್ಮಾವತಿ. ಪಶುಸಂಗೋಪನಾ ಅಧಿಕಾರಿಗಳಾದ ಧನರಾಜ ಬೊಮ್ಮ. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.