ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ದಂಡ

ಬಾದಾಮಿ,ಏ 23: ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ಸ್ವತಃ ತಹಶೀಲ್ದಾರ್ ಸುಹಾಸ ಇಂಗಳೆ, ಪಿ.ಎಸ್.ಐ.ಪ್ರಕಾಶ ಬಣಕಾರ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಸ್ವತಃ ಫೀಲ್ಡಿಗಿಳಿದು ಕೋವಿಡ್ ನಿಯಮ ಪಾಲಿಸದೇ ಇರುವವರಿಗೆ ದಂಡ ವಿಧಿಸಿದರು.
ಪುರಸಭೆ ಸಿಬ್ಬಂದಿಗಳು ಸಹಿತ ಅಧಿಕಾರಿಗಳು ಮುಖ್ಯ ರಸ್ತೆಯಲ್ಲಿ ಮಾಸ್ಕ್ ಧರಿಸದೇ ಬಂದ ಜನರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು. ಗ್ರಾಮೀಣ ಪ್ರದೇಶದಿಂದ ಬಂದ ಮತ್ತು ನಗರದ ಬಹುತೇಕರು ಕೋವಿಡ್ ನಿಯಮ ಪಾಲಿಸದೇ ಮಾಸ್ಕ್ ಹಾಕದೇ ಇರುವುದು ಕಂಡು ಬಂದಿತು. ಪುರಸಭೆ ಮತ್ತು ಪೆÇಲೀಸ್ ಸಿಬ್ಬಂದಿಗಳ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿನ ಹೋಟೆಲ್ ಗಳಿಗೆ ಭೇಟಿ ನೀಡಿ ಅಂಗಡಿಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದರು.
ಗ್ರಾಹಕರಿಗೆ ಕೇವಲ ಪಾರ್ಸಲ್ ಉಪಹಾರ, ಊಟ ನೀಡಬೇಕು ಕುಳಿತು ಗ್ರಾಹಕರಿಗೆ ಊಟ ಉಪಹಾರ ನೀಡಬಾರದು ಎಂದು ತಿಳುವಳಿಕೆ ಹೇಳಿದರು. ಸರಕಾರ ಇμÉ್ಟಲ್ಲಾ ಜಾಗೃತಿ ಮೂಡಿಸುತ್ತಿದ್ದರೂ ಸಹಿತ ಜನರು ಮಾಸ್ಕ್ ಧರಿಸದೇ ಬರುತ್ತಿರುವದು ಅಪಾರ ಕಟ್ಟಿಟ್ಟ ಬುತ್ತಿ. ಜನರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ತಿಳಿಸಿದರು.