ಕೋವಿಡ್ ನಿಯಮ ಉಲ್ಲಂಘನೆ: ಮಾಲೀಕನ ವಿರುದ್ಧ ಕ್ರಮ

ಮೈಸೂರು:ಏ:27: ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಮೈಸೂರಿನಲ್ಲಿ ಅಂಗಡಿ ಮಾಲೀಕನ ವಿರುದ್ಧ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿದ ದೇವರಾಜ ಪೆÇಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್. ಆಸ್ಪತ್ರೆ ರಸ್ತೆಯಲ್ಲಿನ ಮಹಾವೀರ್ ಡಿಸ್ಟಿಬ್ಯೂಟರ್ ಅಂಗಡಿ ಮಾಲೀಕರಾದ ಮಹಾವೀರ್ ವಿರುದ್ಧ ಪ್ರಕರಣ ದಾಖಸಲು ನ್ಯಾಯಾಲಯದಲ್ಲಿ ವರದಿ ಸಲ್ಲಿಸಿಲಾಗಿದೆ.
ಕೋವಿಡ್ -19 ನಿಯಂತ್ರಣದ ಸಂಬಂಧ ಸರ್ಕಾರ ಹೊರಡಿಸಿರುವ ನಿಯಮಗಳ ಉಲ್ಲಂಘನೆ ಮಾಡಿರುವವರ ವಿರುದ್ಧ ನಗರ ಪೆÇಲೀಸರಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತಿದ್ದಾರೆ.
ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಸಂಬಂಧ ಮೈಸೂರು ನಗರ ಪೆÇಲೀಸರು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ನಿನ್ನೆ ಮೈಸೂರು ನಗರದ ಪೆÇಲೀಸರು ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದು, ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ ವ್ಯವಹಾರ ನಡೆಸುವ ಮೂಲಕ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಹಾಗೂ ಖಿhe ಆisಚಿsಣeಡಿ ಒಚಿಟಿಚಿgemeಟಿಣ ಚಿಛಿಣ-2005ರ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.