ಕೋವಿಡ್ ನಿಯಮ ಉಲ್ಲಂಘನೆ: ಟ್ರೈನಿಂಗ್ ಇನ್ಸ್ಟಿಟ್ಯೂಟ್ ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು, ಏ.3- ಕೊರೋನಾ ಉಲ್ಲಂಘಿಸಿದ ರಾಜಾಜಿನಗರ 3ನೇ ಬ್ಲಾಕ್‌ನಲ್ಲಿರುವ ಕ್ಯೂಸ್ಪೈಡರ್ ಸಾಪ್ಟ್ವೇರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.

ಇನ್ಸ್ಟಿಟ್ಯೂಟ್ ನಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ನಿಯಮಗಳನ್ನು ಪಾಲಿಸದೆ ಶೈಕ್ಷಣಿಕ ತರಗತಿ ನಡೆಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ಶನಿವಾರ ಪಾಲಿಕೆ ಆರೋಗ್ಯ ವೈದ್ಯಾಧಿಕಾರಿ ಡಾ.ಮಂಜುಳಾ ಅವರ ನೇತೃತ್ವದ ತಂಡ ದಾಳಿ ನಡೆಸಿ ತಪಾಸಣೆ ನಡೆಸಿತು.

ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದು, ಕೆಲವರು ಮಾಸ್ಕ್ ಕೂಡಾ ಧರಿಸಿರುವುದಿಲ್ಲ. ಈ ಪೈಕಿ ಮಾಸ್ಕ್ ಧರಿಸದ 3 ವಿದ್ಯಾರ್ಥಿಗಳಿಗೆ 750 ರೂ. ದಂಡ ವಿಧಿಸಲಾಗಿರುತ್ತದೆ.

ಕೋವಿಡ್ ನಿಯಮ ಪಾಲನೆ ಮಾಡದೇ ಇರುವುದಕ್ಕೆ ಸಂಸ್ಥೆಗೆ ನೋಟೀಸ್ ನೀಡಿ ಸರ್ಕಾರದ ಆದೇಶದನ್ವಯ ವಿದ್ಯಾರ್ಥಿ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮುಂದಿನ ಆದೆಶದವರೆಗೆ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿರುತ್ತದೆ.

ಇನ್ನು, ಶೈಕ್ಷಣಿಕ ಸಂಸ್ಥೆಯಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿ 40 ಮಂದಿಗೆ ಸ್ಥಳದಲ್ಲಿಯೇ ಮೊಬೈಲ್ ಯೂನಿಟ್ ಮುಖಾಂತರ ಆರ್ ಟಿಪಿಸಿ ಆರ್ ಪರೀಕ್ಷೆ ಮಾಡಲಾಗಿರುತ್ತದೆ. ಸದರಿ ಪರೀಕ್ಷೆಯ ಫಲಿತಾಂಶ ಬಂದ ನಂತರ ತಿಳಿಸಲಾಗುವುದೆಂದು ಆರೋಗ್ಯ ವೈದ್ಯಾಧೀಕಾರಿ ಡಾ. ಮಂಜುಳಾ ತಿಳಿಸಿದ್ದಾರೆ.