ಕೋವಿಡ್ ನಿಯಮ ಉಲ್ಲಂಘನೆ; ಅಗತ್ಯ ವಸ್ತುಗಳ ಖರೀದಿಗೆ ಜನ ಜಂಗುಳಿ

ಜಗಳೂರು.ಮೇ.೧೭; ಕೋರೋನ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ರೀತಿಯ ಒಂದಲ್ಲ ಒಂದು ಕಸರತ್ತು ನಡೆಸಿದರು ರಾಜ್ಯದಲ್ಲಿ ಕೋವಿಡ್  ಸೋಂಕು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿದರೂ ಜನರು ಗುಂಪು ಗುಂಪಾಗಿ ಸೇರುವುದು ಮಾತ್ರ  ಪಟ್ಟಣದಲ್ಲಿ ಹೆಚ್ಚುತ್ತಲೇ ಇದೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಸಲು ಗುಂಪು ಗುಂಪಾಗಿ ಸೇರಿದ ದೃಶ್ಯಗಳು ಕಂಡು ಬಂದಿದೆ ಸಾಮಾಜಿಕ ಅಂತರವು ಕೂಡ ಮಾಯವಾಗಿದೆ ಜನರು ತಮ್ಮ ಜೀವನ ರಕ್ಷಣೆ ಮಾಡುವಲ್ಲಿ ಮಾಸ್ಕ್ ಹಾಕದೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ  ಮಾಸ್ಕ್ ಹಾಕಬೇಕೆಂದು ಸಾಮಾಗ್ರಿ ಖರೀದಿಸಲು ಬಂದ ಜನರಿಗೆ ಸೂಚನೆ ನೀಡಬೇಕಾದ ಕರ್ತವ್ಯ ಅಂಗಡಿ ಮಾಲೀಕರ ಮೇಲಿದೆ ಆದರೆ ಕೋವಿಡ್ ನಿಯಮಗಳನ್ನು ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು  ಉಲ್ಲಂಘನೆ ಮಾಡುತ್ತಿದ್ದಾರೆ  ದುಬಾರಿ ಬೆಲೆಗೆ ಮಾರಾಟ 
ಸಾರ್ವಜನಿಕರು ಲಾಕ್ಡೌನ್ ಮಾಡಿದ ಪರಿಣಾಮವಾಗಿ ಕೂಲಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಹ ಪರಿಸ್ಥಿತಿಯಲ್ಲಿದೆ ಆದರೆ ತರಕಾರಿ ಹಣ್ಣು ಮಾಂಸ ದಿನಸಿ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಇದನ್ನು ನೋಡಿ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಯಾರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪ ಮಾಡುತ್ತಿದ್ದಾರೆ