ಕೋವಿಡ್ ನಿಯಮವನ್ನು ಪಾಲಿಸಿ ಜಿ.ಪಿ.ಅಶ್ವಿನ್‍ಕುಮಾರ್

ಕೆ.ಆರ್.ಪೇಟೆ.ಏ.28: ತಾಲ್ಲೂಕಿನ ಜನರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯಿಂದ, ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಯುವ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಪಿ.ಅಶ್ವಿನ್ ಕುಮಾರ್ ಕರೆ ನೀಡಿದರು.
ಅವರು ತಾಲ್ಲೂಕಿನ ಜನತೆಗೆ ಹಾಗೂ ಕೊವಿಡ್ ವಾರಿಯರ್ಸ್‍ಗಳಾದ ಆರೋಗ್ಯ ಇಲಾ ಖೆಯ ನೌಕರರು, ಕಂದಾಯ ಇಲಾಖೆಯ ಸಿಬ್ಬಂದಿಯವರಿಗೆ ಹಾಗೂ ಪೆÇಲೀಸ್ ಇಲಾಖೆಯ ನೌಕರರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ಮಾತನಾಡಿದರು. ತಹಶಿಲ್ದಾರ್ ಎಂ. ಶಿವಮೂರ್ತಿ,ಸಿಪಿಐ ದೀಪಕ್, ಪಟ್ಟಣ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ, ಗ್ರಾಮಾಂತರ ಠಾಣೆಯ ಪಿಎಸ್‍ಐ ಸುರೇಶ್ ಮುಂತಾದವರನ್ನು ಭೇಟಿಮಾಡಿ ಮಾಸ್ಕ್ಗಳನ್ನು ನೀಡಿದರು. ಹಾಗೆಯೇ ಸಾರ್ವಜನಿಕರಿಗೂ ಮಾಸ್ಕ್ ವಿತರಣೆ ಮಾಡಲಾಯಿತು.
ತಹಶಿಲ್ದಾರ್ ಎಂ.ಶಿವಮೂರ್ತಿ ಅಶ್ವಿನ್‍ರವರಂತೆ ಸಾಮಾಜಿಕ ಕಳಕಳಿ ಎಲ್ಲರಲ್ಲೂ ಬರಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾ ಡಿಕೊಂಡರೆ ಕೊರೋನಾ ಮಹಾ ಮಾರಿಯನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಕೊರೋನಾ ಎಂಬ ಮಹಾ ಮಾರಿಯಿಂದ ನಿಮ್ಮನ್ನು ಹಾಗು ನಿಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಟಿ.ವೈ.ಆನಂದ್,ಟೈಲರ್ ಮಂಜುನಾಥ್, ಚೇತನ್, ಪದ್ಮನಾಭ, ಶಿವಕುಮಾರ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.