ಕೋವಿಡ್ ನಿಯಮಗಳನ್ನು ಪಾಲಿಸಲು ಮುಖ್ಯಾಧಿಕಾರಿ ಸೂಚನೆ

ವಿಜಯಪುರ, ಏ ೨೩-ಥಿಯೇಟರ್‌ಗಳು, ಜಿಮ್, ಸ್ವಿಮ್ಮಿಂಗ್ ಪೂಲ್, ಕಲ್ಯಾಣ ಮಂಟಪಗಳು, ಮೊದಲಾಗಿ ಕೊರೊನಾ ನೀತಿ, ನಿಯಮಗಳಡಿಯಲ್ಲಿ ಎಲ್ಲವನ್ನು ಕೂಡಲೇ ಮುಚ್ಚಬೇಕೆಂದು, ಚುನಾವಣಾ ಸಂದರ್ಭದಲ್ಲಿಯೂ ೫ ಮಂದಿಗಿಂತ ಹೆಚ್ಚು ಮಂದಿ ಗುಂಪು-ಗುಂಪಾಗಿ ಮತ ಯಾಚನೆಯಲ್ಲಿ ತೊಡಗಬಾರದೆಂದು, ರಾತ್ರಿ ೯ ರ ನಂತರ ಯಾರೂ ಮತ ಯಾಚನೆಗೆ ಹೊರಬರಬಾರದೆಂದು, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ತಿಳಿಸಿದರು.
ಅವರು ಶಿಡ್ಲಘಟ್ಟ ರಸ್ತೆಯ ಎರಡೂ ಬದಿಗಳಲ್ಲಿ ಪುರಸಭೆ ವತಿಯಿಂದ ಸ್ಯಾನಿಟೈಸೇಶನ್ ಕಾರ್ಯ ವೀಕ್ಷಿಸಿ, ವರದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದಲ್ಲಿ ಪುರಸಭಾ ಚುನಾವಣೆ ನಡೆಯುತ್ತಿರುವ ಕಾರಣ ವೀಕೆಂಡ್‌ನಲ್ಲಿ ಅಭ್ಯರ್ಥಿಗಳು ಗೊಂದಲಗಳಿಗೊಳಗಾಗದೇ, ತೊಂದರೆ ತಂದುಕೊಳ್ಳಬಾರದೆಂದು, ವೀಕೆಂಡ್ ಕರ್ಫ್ಯೂ ಉಲ್ಲಂಘಿಸುವವರ ವಿರುದ್ದ ಪುರಸಭೆ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ಶನಿವಾರ ಮತ್ತು ಭಾನುವಾರಗಳಂದು ಹಾಲು, ಔಷಧಿ ಅಂಗಡಿ, ದಿನಸಿ ಅಂಗಡಿ ಹಾಗೂ ತರಕಾರಿ ಅಂಗಡಿಗಳು, ಮಾತ್ರ ಕಾರ್ಯನಿರ್ವಹಿಸಲು ಅನುಮತಿ ಇದ್ದು, ಕಲ್ಯಾಣ ಮಂಟಪಗಳಲ್ಲಿ ಪೂರ್ವ ನಿರ್ಧರಿತವಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿದ್ದಲ್ಲಿ ಪಾಸ್ ಹೊಂದಿದ್ದವರು ಮದುವೆ ಕಾರ್ಯದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.