ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲ – ಸಿರಾಜ್ ಜಾಫ್ರಿ

ರಾಯಚೂರು, ಮೇ.೧೯- ಜಿಲ್ಲೆಯಲ್ಲಿ ಕೋವಿಡ್ ನಿರ್ಮೂಲನೆಗೆ ಒಪೆಕ್ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕವಾದ ಸೌಲಭ್ಯ ನೀಡದೆ ಅವ್ಯವಸ್ಥೆಗೆ ಕಾರಣವಾಗಿದೆ
ಕೋವಿಡ್ ನಿರ್ಮೂಲನೆಯನ್ನು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಯಚೂರು ನವ ನಿರ್ಮಾಣ ವೇದಿಕೆ ಅಧ್ಯಕ್ಷ ಸಿರಾಜ್ ಜಾಫ್ರಿ ಒತ್ತಾಯಿಸಿದರು.
ಅವರು ನಗರದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮೇ ೪ ರಿಂದ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ನಿಯಮ ಉಲ್ಲಂಘನೆ ಆರೋಪದಲ್ಲಿ ಸಾರ್ವಜನಿಕರಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಸುಮಾರು ೮ ಲಕ್ಷ ಸಂಗ್ರಹಿಸಿದ್ದು ಲಾಕ್ ಡೌನ್ ವೇಳೆಯಲ್ಲಿ ಜನಸಾಮಾನ್ಯರ ಮೇಲೆ ಮೊರೆ ಹಾಕಿದೆ. ಒಪೆಕ್ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯ ನೀಡದೆ ಸಾವಿಗೆ ಕಾರಣವಾಗಿದೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರು ನಿರ್ಲಕ್ಷ ವಹಿಸಿದ್ದು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಸ್ಪತ್ರೆಗಳಲ್ಲಿ ಸತ್ತವರ ಹೆಸರಿನಲ್ಲಿ ಹಾಗೂ ಡಿಸ್ಚಾರ್ಜ್ ಆದವರ ಮೇಲೆ ಬೆಡ್ ಬುಕ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆ ಇದೆ ಆದರೆ ನಗರ ಶಾಸಕ ಶಿವರಾಜ ಪಾಟೀಲ್ ಅವರು ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಸರಿಯಾದ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ೧೧ ಸಾವಿರಕ್ಕಿಂತ ಹೆಚ್ಚು ವೆಚ್ಚ ಮಾಡಬಾರದು ಎಂದು ಆದೇಶ ನೀಡಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಶಾಸಕರು ಖಾಸಗಿ ಆಸ್ಪತ್ರೆಗಳ ಯಾವುದೇ ಸಮಿತಿ ಮಾಡಿಲ್ಲ ಎಂದು ಆರೋಪಿಸಿದರು.
ಲಾಕ್ ಡೌನ್ ಮಾಡಿದ್ದರಿಂದ ದಿನಗೂಲಿ ನೌಕರರಿಗೆ ಹಾಗೂ ವಿವಿಧ ವ್ಯಾಪಾರಸ್ಥರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ವ್ಯಾಪಾರಸ್ಥರ ಬಾಡಿಗೆ ವಿದ್ಯುತ್ ವೆಚ್ಚ ಇತ್ಯಾದಿ ಖರ್ಚುವೆಚ್ಚಗಳು ಪಾವತಿ ಮಾಡಬೇಕಾಗಿರುವ ಕಾರಣ ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಹಾಗೂ ಅನೇಕರು ಮಾನಸಿಕವಾಗಿ ಒಳಗಾಗಿದ್ದಾರೆ. ಕೋವಿಡ್ ಗಿಂತ ಹಸಿವಿನ ತೀವ್ರತೆ ಹೆಚ್ಚಾಗಿದೆ. ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಜನಸಾಮಾನ್ಯರ ಮೇಲೆ ಲಾಕ್ ಡೌನ್ ಏರಿ ಅನೇಕ ಸಮಸ್ಯೆಗೆ ಕಾರಣವಾಗಿದೆ ಎಂದರು.ಅಮೆರಿಕದ ಬೋಯಿಂಗ್ ಆಸ್ಪತ್ರೆಯನ್ನು ಜಿಲ್ಲೆಗೆ ತರುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದುರಾಗಿದ್ದು, ಸಂಸದ ಅಮರೇಶ್ವರ ನಾಯಕ್ ಬೋಯಿಂಗ್ ಆಸ್ಪತ್ರೆಯನ್ನು ಜಿಲ್ಲೆಗೆ ಬರುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಕೋವಿ ಡ್ ನಂತಹ ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗಲಿದೆ. ಆದರೆ ರಾಜಕೀಯ ನಾಯಕರ ನಿರ್ಲಕ್ಷದಿಂದ ಕಲ್ಬುರ್ಗಿಗೆ ಹೋಗುವ ಸಾಧ್ಯತೆ ಹೆಚ್ಚಾಗಿದ್ದು ,ಕೂಡಲೇ ಎಚ್ಚೆತ್ತು ಜಿಲ್ಲೆಗೆ ಬೋಯಿಂಗ್ ಆಸ್ಪತ್ರೆ ಬರುವಂತೆ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.ಸರ್ಕಾರ ಲಾಕ್ ಡೌನ್ ನಿಂದ ತತ್ತರಿಸಿದ ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಹಾಗೂ ಆರೋಗ್ಯ ಒಂದು ಮೂಲಭೂತ ಹಕ್ಕಾಗಿದ್ದು, ಸಮರ್ಪಕವಾಗಿ ಸೌಲಭ್ಯ ನೀಡಬೇಕು. ಡಿಎಚ್‌ಒ ಹಾಗೂ ರೀಮ್ಸ್ ನ ನಿರ್ದೇಶಕ ಬಸವರಾಜ ಪಿರಪೂರ್ ಕರ್ತವ್ಯ ನಿರ್ವಹಿಸಲು ಫಲವಾಗಿದ್ದು ಅವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರದಲ್ಲಿ ಮಾಡುವುದನ್ನು ತಡೆಗಟ್ಟಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.