ಕೋವಿಡ್ ನಿಯಂತ್ರಣ ಸಂಬಂಧ ಛತ್ರ, ಸಮುದಾಯ ಭವನದ ಮಾಲೀಕರುಗಳಿಗೆ ಸೂಚನೆ ನೀಡಿದ ಡಿಸಿಪಿ ಡಾ.ಪ್ರಕಾಶ್ ಗೌಡ

ಮೈಸೂರು,ನ.5: ಕೋವಿಡ್-19 ರೋಗಾಣು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ಮೈಸೂರು ನಗರ ಪೆÇಲೀಸ್ ಘಟಕದಿಂದ ವಿವಿಧ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕೋವಿಡ್-19 ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ಛತ್ರ/ಸಮುದಾಯ ಭವನ/ ಅಥವಾ ಸಭಾಂಗಣದಲ್ಲಿ ಖಾಸಗಿ ಸಮಾರಂಭಗಳ ಬಗ್ಗೆ ಸೂಚಿಸಿರುವ ಅಂಶಗಳನ್ನು ಮೈಸೂರು ನಗರದ ಛತ್ರ/ಸಮುದಾಯ ಭವನದ ಮಾಲೀಕರು/ ವ್ಯವಸ್ಥಾಪಕರುಗಳಿಗೆ ವಿವರವಾಗಿ ತಿಳುವಳಿಕೆ ನೀಡುವ ಸಂಬಂಧ ಮೈಸೂರು ನಗರದ ಪೆÇಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ, ಸೂಚನೆಯಂತೆ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ನೇತೃತ್ವದಲ್ಲಿ ಡಿಸಿಪಿ ಗೀತಪ್ರಸನ್ನ, ಹಾಗೂ ವಿಭಾಗದ ಎ.ಸಿ.ಪಿ.ಅವರುಗಳ ಸಮ್ಮುಖದಲ್ಲಿ ಪೆÇಲೀಸ್ ಆಯುಕ್ತರ ಕಛೇರಿಯ ಆವರಣದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಭೆಗೆ ಮೈಸೂರು ನಗರದ ಛತ್ರ/ಸಮುದಾಯ ಭವನ/ ಅಥವಾ ಸಭಾಂಗಣಗಳ ಮಾಲೀಕರು/ ಮುಖ್ಯಸ್ಥರುಗಳು ಹಾಜರಿದ್ದು ಅವರಿಗೆ ಡಿ.ಸಿ.ಪಿ ಪ್ರಕಾಶ್ ಗೌಡ ಸೂಚನೆ ನೀಡಿದರು.
ಛತ್ರ/ಸಮುದಾಯ ಭವನ ಅಥವಾ ಸಭಾಂಗಣದಲ್ಲಿ ಮದುವೆ/ಇನ್ನಿತರ ಸಮಾರಂಭಗಳಲ್ಲಿ ನಡೆಯುವ ಕಾರ್ಯಕ್ರಮಗಳ ಸಂಬಂಧ ಸರ್ಕಾರವು ಒಳಾಂಗಣ ಸ್ಥಳಗಳಲ್ಲಿ ಸಭಾ ಭವನದ ಒಟ್ಟು ಸಾಮಥ್ರ್ಯದ ಕನಿಷ್ಠ ಶೇ.50% ಅಥವಾ ಗರಿಷ್ಠ 200 ಜನರಿಗೆ ಮಾತ್ರ ಅನುಮತಿ ನೀಡಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ತಪ್ಪದೆ ಮುಖಗವಸು ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈತೊಳೆಯುವಿಕೆ ಅಥವಾ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದರು.
ಛತ್ರ ಅಥವಾ ಸಭಾಂಗಣಗಳ ಅಥವಾ ಸಭಾಂಗಣದ ಮಾಲೀಕರ/ವ್ಯವಸ್ಥಾಪಕರುಗಳು ಮದುವೆ ಅಥವಾ ಇತರೆ ಕಾರ್ಯಕ್ರಮ ನಡೆಯುವ ದಿನಾಂಕ ಮತ್ತು ಕಾರ್ಯಕ್ರಮ ಆಯೋಜಕರ ಸಂಪೂರ್ಣ ವಿವರವನ್ನು ಒಂದು ವಾರ ಮುಂಚಿತವಾಗಿ ವ್ಯಾಪ್ತಿಯ ಪೆÇಲೀಸ್ ಠಾಣೆಗೆ ಕಳುಹಿಸಿಕೊಡುವಂತೆ ಸೂಚಿಸಲಾಯಿತು. ಛತ್ರ ಅಥವಾ ಸಭಾಂಗಣವನ್ನು ಮುಂಗಡವಾಗಿ ಕಾಯ್ದಿರಿಸುವ ವೇಳೆ, ಕಾರ್ಯಕ್ರಮ ನಡೆಸುವ ವೇಳೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಬಗ್ಗೆ ತಿಳಿಸುವುದು ಹಾಗೂ ಸರ್ಕಾರದ ಅಧಿಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಆಯೋಜಕರಿಗೆ ಸೂಚನೆಗಳನ್ನು ನೀಡುಬೇಕು. ಛತ್ರ ಅಥವಾ ಸಭಾಂಗಣದಲ್ಲಿ ಅಡಿಗೆ ಭಟ್ಟರು, ಊಟ ಬಡಿಸುವವರು, ಸ್ವಚ್ಛತಾ ಕಾರ್ಯ ನಿರ್ವಹಿಸುವವರು, ಫೆÇೀಟೋ ಮತ್ತು ವಿಡಿಯೋ ಗ್ರಾಫರ್ಸ್ ತಪ್ಪದೇ ಮಾಸ್ಕ್, ಹ್ಯಾಂಡ್ಗ್ಲೌಸ್ ಧರಿಸುವಂತೆ ಸೂಚಿಸಬೇಕು ಎಂದರು.
ಛತ್ರ ಅಥವಾ ಸಭಾಂಗಣದ ಪ್ರವೇಶದ್ವಾರ, ಹೊರ ಹೋಗುವ ಕಡೆಗಳಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು. ಮದುವೆ/ ಸಮಾರಂಭ ನಡೆಯುವ ದಿನಾಂಕ ಮತ್ತು ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಒಂದು ವಾರ ಮುಂಚಿತವಾಗಿ ಸಂಗ್ರಹಿಸಿಡಬೇಕು. ಛತ್ರ/ಸಮುದಾಯ ಭವನ/ ಅಥವಾ ಸಭಾಂಗಣದಲ್ಲಿ ಮತ್ತು ಊಟದ ಹಾಲ್ನಲ್ಲಿ ಸಾಮಾಜಿಕ ಅಂತರ ಕಾಯ್ದಿರಿಸಿ ಆಸನಗಳ ವ್ಯವಸ್ಥೆ ಮಾಡಬೇಕು. ಸರ್ಕಾರದ ಅಧಿಸೂಚನೆಗಳ ಪಾಲನೆ ಬಗ್ಗೆ ಆಯೋಜಕರಿಗೆ / ವ್ಯವಸ್ಥಾಪಕರಿಗೆ ಅರಿವು ಮೂಡಿಸಿ, ಸರ್ಕಾರದ ಆದೇಶಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.ಸರ್ಕಾರದ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿದ ಛತ್ರ ಅಥವಾ ಸಭಾಂಗಣದ ಮಾಲೀಕರ/ಆಯೋಜಕರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲಿಸಲಾಗುವುದು.
ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ನಂ.8211; ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಾವಶ್ಯಕವಾಗಿರುತ್ತದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತಕ ಕಾಯ್ದುಕೊಳ್ಳುವ ಮೂಲಕ ವೈರಾಣು ಹರಡುವಿಕೆಯನ್ನು ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದ್ದು ಈ ಕಾರ್ಯದಲ್ಲಿ ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮೈಸೂರು ನಗರದ ಪೆÇಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.