ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ ಯಶವಂತಗೌಡಪಾಟೀಲ್

ಇಂಡಿ, ಜೂ.2-ಕೋವಿಡ್ ಎರಡನೆಯ ಅಲೆ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದ್ದು ಸಮಾಧಾನಕರ ಸಂಗತಿ, ಗ್ರಾಮೀಣ ಸೋಂಕಿತರನ್ನು ಮನವೋಲಿಸಿ ಕಡ್ಡಾಯವಾಗಿ ಕೋವಿಡ್ ಸೆಂಟರಗೆ ಕರೆ ತರಬೇಕು. ಸೋಂಕು ನಿಯಂತ್ರಣಕ್ಕೆ ಗ್ರಾ.ಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ, ಕಾರ್ಯಪಡೆ ಸದಸ್ಯರ ಜೊತೆಗೂಡಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಕೋವಿಡ್ ನಿಯಂತ್ರಣ ಮಾಡಬೇಕು ಎಂದು ಇಂಡಿಯ ಶಾಸಕ ಯಶವಂತಗೌಡ ಪಾಟೀಲ್ ಹೇಳಿದರು.
ಅವರು ಇಂಡಿ ಪಟ್ಟಣ ಮತ್ತು ಝಳಕಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಇಂಡಿ ವಲಯದ 19 ಮತ್ತು ಝಳಕಿಯಲ್ಲಿ ಝಳಕಿ ವಲಯದ 19 ಪಿಡಿಓಗಳ ಕೋವಿಡ್ ನಿಯಂತ್ರಣ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ 10 ಕೋವಿಡ್ ಸೆಂಟರ್‍ಗಳನ್ನು ಪ್ರಾರಂಬಿಸಲಾಗಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಝಳಕಿಯಲ್ಲಿ ವಿಜಯಪೂರ ಜಿಲ್ಲಾ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಬ್ಬಾರ ಅಲಿ ಹಳ್ಳಿ, ಎಸ್.ಆರ್.ಕನಮಡಿ, ವಿಜಯಾ ತಳವಾರ, ಸಿ.ಜಿ.ಪಾರೆ, ಬಸವರಾಜ ಬಬಲಾದ, ಧನಸಿಂಗ್ ರಾಠೋಡ, ಶಿವು ಪೂಜಾರಿ, ಪ್ರಕಾಶ ರಾಠೋಡ್, ಪ್ರದೀಪ ಮಾನೆ, ಲಾಲಸಿಂಗ ನದಾಫ್, ಎಸ್.ಆರ್.ಶಿವಣಗಿ, ಇಂಡಿಯಲ್ಲಿ ಪಿಡಿಓಗಳಾದ ಮಲ್ಲಪ್ಪ ಹಿರೇಕುರಬರ, ಸಂಜಯ ಪವಾರ, ಸಿದರಾಯ ಬಿರಾದಾರ, ಶೋಭಾ ಹೊರಕಟ್ಟಿ, ಪ್ರಭಾವತಿ ಕುಂಬಾರ, ಜೆ.ಜಿ.ಕುಲಕರ್ಣಿ, ಸುರೇಶ ಲೋಣಿ ಮತ್ತಿತರಿದ್ದರು.