ಕೋವಿಡ್ ನಿಯಂತ್ರಣ ಕುರಿತು ಅರಿವು

ಕೆ.ಆರ್.ಪೇಟೆ:ಏ:17: ಕೊರೋನಾ ಮಹಾಮಾರಿ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗಡಿಗಳ ಮಾಲೀಕರಿಗೆ, ಆಟೋ ಚಾಲಕರಿಗೆ ಮಾಸ್ಕ್ ಧರಿಸುವುದು, ಲಸಿಕೆ ಪಡೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಸಾರ್ವಜನಿಕರಿಗೆ ತಹಶೀಲ್ದಾರ್ ಎಂ.ಶಿವಮೂರ್ತಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅರಿವು ಮೂಢಿಸಿದರು.
ಪಟ್ಟಣದ ಹಳೆಯ ಪುರಸಭಾ ಕಛೇರಿಯ ಎದುರು ಸಾರ್ವಜನಿಕರನ್ನು ಉದ್ದೇಶಿಸಿ ಮಾತ ನಾಡಿ, ತಹಶೀಲ್ದಾರ್ ಪ್ರತಿನಿತ್ಯ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಮನು ಕುಲ ವನ್ನೇ ಅಸ್ಥವ್ಯಸ್ಥ ಮಾಡುತ್ತಿರುವ ರೂಪಾಂತರಿ ಕೊರೋನಾ ವೈರಸ್ ರಾಜ್ಯದಲ್ಲಿ ಪ್ರತೀದಿನ 50-60 ಜನರನ್ನು ಬಲಿಪಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಲಾಕ್ ಡೌನ್, ರಾತ್ರಿ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ನಂಥಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್ ಬಸ್‍ನಿಲ್ದಾಣ, ಆಟೋನಿಲ್ದಾಣ, ವೈನ್‍ಶಾಪ್, ಅಂಗಡಿಗಳು, ಟೀ ಕ್ಯಾಂಟಿನ್, ಹಣ್ಣಿನ ಅಂಗ ಡಿಗಳು, ಸೇರಿದಂತೆ ಮುಖ್ಯ ರಸ್ತೆಯಲ್ಲಿ ಇರುವ ಅಂಗಡಿಗಳಿಗೆ ತೆರಳಿ ಮಾಲೀಕರುಗಳಿಗೆ ಕೊರೋನಾ ಮಾರ್ಗಸುಚಿಗಳನ್ನು ತಿಳಿಸಿ ಅವು ಗಳ ಪಾಲನೆ ಮಾಡುವಂತೆ ಸೂಚಿಸಿದರು. ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಇಲ್ಲದಿದ್ದರೆ ಯಾವುದೇ ಪದಾರ್ಥಗಳನ್ನು ನೀಡ ಬೇಡಿ, ಅವರುಗಳನ್ನು ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿ ಸಾಲಿನಲ್ಲಿ ನಿಲ್ಲಿಸಿ ಅಗತ್ಯ ವಸ್ತುಗಳನ್ನು ನೀಡಿ, ವೈನ್‍ಶಾಪ್‍ಗಳಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಇಲ್ಲದಿದ್ದರೆ ಅವರುಗಳಿಗೆ ಮದ್ಯ ವಿತರಣೆ ಮಾಡಬಾರದು, 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಸಾರ್ವಜನಿಕ ಆಸ್ಪತ್ರೆ, ಹಾಗೂ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು ಎಲ್ಲರೂ ಲಸಿಕೆ ಪಡೆಯುವ ಮೂಲಕ ಮಹಾಮಾರಿಯ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದರೆ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಅನಿವಾರ್ಯವಾಗಿ ಲಾಕ್‍ಡೌನ್ ಹೇರಬೇಕಾಗುತ್ತದೆ ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಇದಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಬೇಕಾದುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದವರಿಗೆ 100 ರೂಪಾಯಿಗಳ ದಂಡವನ್ನು ವಿಧಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಇಂಜಿನಿಯರ್ ಅರ್ಚನ, ಆರೋಗ್ಯ ಸಹಾಯಕ ಅಶೋಕ್, ಪುಟ್ಟಣ್ಣ, ರಾಜಸ್ವ ನಿರೀಕ್ಷಕ ರಾಜೇಶ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೆ ಮಂಜು ಸೇರಿದಂತೆ ಪುರಸಭಾ ಸಿಬ್ಬಂದಿಗಳು ಹಾಜರಿದ್ದರು.