ಕೋವಿಡ್ ನಿಯಂತ್ರಣಕ್ಕೆ ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್ ಮನವಿ

ಇಂಡಿ :ಮೇ.3:ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್ ತಡೆಗೆ ಸೂಕ್ರ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ ಬಳಕೆ ಮಾಡಿಕೊಂಡು ಹೆಚ್ಚುವರಿ ಕೋವಿಡ್ ಆಸ್ಪತ್ರೆ ತೆರೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಿಂದ ರೋಗಿಗಳು ತೀವೃ ತೊಂದರೆ ಆನುಭವಿಸುತ್ತಿದ್ದಾರೆ. ಕೂಡಲೆ ತಾಲೂಕ ಆಡಳಿತ ಪಟ್ಟಣದಲ್ಲಿ ಕೋವಿಡ್ ಆಸ್ಪತ್ರೆಗಳು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ ನೇತ್ರತ್ವದಲ್ಲಿ ಜೆಡಿಎಸ್ ಪದಾ„ಕಾರಿಗಳು ಶನಿವಾರ ಎಸಿ ರಾಹುಲ ಶಿಂಧೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ,ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ತಾಲೂಕ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 40 ಬೆಡ್‍ಗಳಿದ್ದು, ಇವು ಪೂರ್ಣಭರ್ತಿಯಾಗಿವೆ, ಇನ್ನೂಳಿದ ರೋಗಿಗಳಿಗೆ ಬೆಡ್ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ.ತಾಲೂಕ ಆಡಳಿತ ಸರ್ಕಾರದ ಗಮನಕ್ಕೆ ತಂದು ಪಟ್ಟಣದಲ್ಲಿ ಖಾಲಿ ಇರುವ ಸ್ಪಂಧನಾ ಆಸ್ಪತ್ರೆಯನ್ನು ಆಡಳಿತ ಮಂಡಳಿಯ ಮನವೊಲಿಸಿ ಪಡೆದು, ಕೊರೋನಾ ಚಿಕಿತ್ಸಾ ಸೆಂಟರ್ ಆರಂಭಿಸಬೇಕು.ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ವೆಂಟಿಲೆಟರ್,ಆಕ್ಸಿಜನ್ ವ್ಯವಸ್ಥೆ ಮಾಡಬೇಕು. ಸ್ಪಂಧನಾ ಆಸ್ಪತ್ರೆಯನ್ನು ಪಡೆದು ಕೊರೋನಾ ಆಸ್ಪತ್ರೆ ಆರಂಭಿಸಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಕಾಮಗೊಂಡ, ಶ್ರೀಶೈಲಗೌಡ ಪಾಟೀಲ,ಸಿದ್ದು ಡಂಗಾ,ಬಿ.ಎಲ್.ರಾಠೋಡ,ಬಾಬು ಮೇತ್ರಿ ಇತರರು ಈ ಸಂದರ್ಭದಲ್ಲಿ ಇದ್ದರು.