ಕೋವಿಡ್ ನಿಯಂತ್ರಣಕ್ಕೆ ಆಗ್ರಹಿಸಿ ಎಐಡಿಎಸ್‍ಓ ಸಪ್ತಾಹ

ಕಲಬುರಗಿ ಏ 25: ಕೋವಿಡ್ 19 ನಿಯಂತ್ರಿಸಲು ಸರಿಯಾದ ಆರೋಗ್ಯ ವ್ಯವಸ್ಥೆಲ್ಲದೇ ಜನ ಪ್ರಾಣ ಬಿಡುತ್ತಿದ್ದಾರೆ. ಈ ಪ್ರಕ್ಷುಬ್ಧ ಪರಿಸ್ಥಿತಿಗೆ ನಮ್ಮ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯೇ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವಂತೆ, ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಲು ಇಂದಿನಿಂದ (ಏಪ್ರಿಲ್ 25) ಮೇ 1 ರವರೆಗೆ ಅಖಿಲ ಭಾರತ ಸಪ್ತಾಹಕ್ಕೆ ಕರೆಕೊಟ್ಟಿದೆ ಎಂದುಶಹಾಬಾದ ಎ ಐ ಡಿ ಎಸ್ ಓ ಅಧ್ಯಕ್ಷ ತುಳಜರಾಮ ಎನ್ .ಕೆ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ಇದರ ಅಂಗವಾಗಿ ಪ್ರತಿದಿನವೂ ವಿಭಿನ್ನ ರೀತಿಯಲ್ಲಿ ಆನ್ಲೈನ್ ಚಳುವಳಿಯನ್ನು ಸಂಘಟಿಸಲಾಗುವದು ಎಂದಿದ್ದಾರೆ.