ಕೋವಿಡ್ ನಿಯಂತ್ರಣಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾಂಕ್ ಬಂದ್

ಬಳ್ಳಾರಿ ಮೇ 31 : ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ನಾಳೆ ಮಧ್ಯಾಹ್ನ 12 ರಿಂದ ಬರುವ ಜೂನ್ 7 ಬೆಳಿಗ್ಗೆ 6 ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದು. ಇದರೊಂದಿಗೆ ಜೂನ್ 2 ರಿಂದ ಬ್ಯಾಂಕ್ ಗಳ ಚಟುವಟಿಕೆಗಳನ್ನು ಸಹ ಬಂದ್ ಮಾಡಲಿದೆಂದು ಜಿಲ್ಲಾಧಿಕಾರಿ‌ ಪವನ್ ಕುಮಾರ್ ಮಾಲಪಾಟಿ ಘೋಷಣೆ ಮಾಡಿದ್ದಾರೆ.

ಸಧ್ಯ ಜಿಲ್ಲೆಯಲ್ಲಿ‌ಕೋವಿಡ್ ಸೋಂಕಿನ‌ ಪ್ರಮಾಣ ಶೇ 20 ರಿಂದ 25 ಕ್ಕೆ ಬಂದಿದೆ. ಆದರೂ ಲಾಕ್ಡೌನ್ ತೆರವುಗೊಳಿಸಬೇಕೆಂದರೆ ಶೇ 5 ಕ್ಕೆ ಬರಬೇಕು ಎನ್ನಲಸಗುತ್ತಿದೆ. ಅದಕ್ಕಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ತಗೆದುಕೊಳ್ಳಲು‌ ಮುಂದಾಗಿದೆ.
ಬ್ಯಾಂಕುಗಳ ಈಗ ಕಾರ್ಯ ನಿರ್ವಹಿಸುತ್ತಿವೆ ಅದರಿಂದ ಕೆಲವರು ವೇಳೆ ವಿನಾಕಾರಣ ಹೊರಗಡೆ ಓಡಾಡುತ್ತ ಬ್ಯಾಂಕ್ ನೆಪ ಹೇಳುತ್ತಿದ್ದಾರೆ.
ಅದಕ್ಕಾಗಿ ನಾಡಿದ್ದು ಜೂನ್ 2 ರಿಂದ ಬರುವ ಸೋಮವಾರದ ವರಗೆ ಬ್ಯಾಂಕ್ ಬಂದ್ ಮಾಡಲಿದೆ. ಆದರೆ ಜನರಿಗೆ ತೊಂದರೆ ಆಗದಂತೆ ಎಟಿಎಂಗಳಿರುತ್ತವೆ ಎಂದಿದ್ದಾರೆ