ಕೋವಿಡ್ ನಿಮಿತ್ತ ಕಾನಾಮಡುಗು ಜಾತ್ರೆ ಸರಳ ಆಚರಣೆ

ಕೂಡ್ಲಿಗಿ.ಡಿ.22: ತಾಲೂಕಿನ ಸುಕ್ಷೇತ್ರ ಅನ್ನ ದಾಸೋಹ ಮಠದ ಕಾನಾಮಡುಗು ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವವು ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಕಾನೂನು ಪರಿಪಾಲನಾ ದೃಷ್ಟಿಯಿಂದ ಇದೇ 23 ರಿಂದ 25 ರವರೆಗೆ ನಡೆಯುವ ಜಾತ್ರೆ ಸರಳವಾಗಿ ನಡೆಯಲಿದೆ ಎಂದು ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ.ಐಮಡಿ ಶರಣಾರ್ಯರು ತಿಳಿಸಿದ್ದಾರೆ.
ದೇಶಾದ್ಯಂತ ಕರೋನಾ ವೈರಸ್ ಅಟ್ಟಹಾಸ ಮೆರೆದಿದೆ. ಇಂತಹ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸುವುದರಿಂದ ಹೆಚ್ಚಿನ ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ, ಭಕ್ತಾಧಿಗಳ ಆರೋಗ್ಯ ಸುರಕ್ಷತೆ ಕಾಪಾಡುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುವುದು. ಆದ್ದರಿಂದ ಶ್ರೀ ಶರಣ ಬಸವೇಶ್ವರ ಸ್ವಾಮಿಯ ಭಕ್ತಾಧಿಗಳು ಸಹಕರಿಸಬೇಕು ಬರುವ ಭಕ್ತಾಧಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಬರುವಂತೆ ಹಾಗೂ ಸರ್ಕಾರದ ಕೋವಿಡ್ ನಿಯಮ ಪರಿಪಾಲಿಸುವಂತೆ ಕಾನಾಮಡುಗಿನ ದಾ.ಮ.ಐಮಡಿ ಶರಣಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.