ಕೋವಿಡ್ ನಿಂದ ಸಿಎಂ ಗುಣಮುಖರಾಗಲು ಪೂಜೆ

ಬಳ್ಳಾರಿ, ಏ.17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರ ಕೋವಿಡ್ ಸೋಂಕಿನಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಬಿಎಸ್ ವೈ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಬೆಂಬಲಿಗರು, ಅಭಿಮಾನಿಗಳು ನಗರದ ಕೋಟೆ ಪ್ರದೇಶದ ಶ್ರೀ ಕೋಟೆ ಆಂಜನೇಯ ಸ್ವಾಮೀ ದೇಗುಲದಲ್ಲಿ ಇಂದು ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು.
ಬಿಎಸ್ ವೈ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ಅವರು ಮಾತನಾಡಿ, ಯಡಿಯೂರಪ್ಪ ಅವರಿಗೆ ಕೊರೋನಾ ಇರುವುದು ವರದಿಯಲ್ಲಿ ದೃಢಪಟ್ಟಿದ್ದು, ಕೂಡಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಸಕಲ ಕಷ್ಟಗಳ ನಿವಾರಕ ಶ್ರೀ ಆಂಜಿನೇಯ ಸ್ವಾಮೀ ದೇಗುಲದಲ್ಲಿ ವಿಶೇಷ ‌ಪೂಜೆ, ಅರ್ಚನೆ ಸಲ್ಲಿಸಲಾಗಿದೆ. ನಾಡಿನ ದೊರೆ ಮುಖ್ಯಮಂತ್ರಿಗಳು ಬೇಗನೇ ಗುಣಮುಖರಾಗಿ ಎಂದಿನಂತೆ ರಾಜ್ಯದ ಜನರ ಸೇವೆ ಮಾಡುವಲ್ಲಿ ‌ನಿರತರಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಯ್ಯ,ರಘು, ಸಚಿನ್, ಈಶ್ವರ್ ಗೌಡ, ಜಯಪ್ರಕಾಶ್, ಕಲ್ಪನಾ, ಲಲಿತಾ, ದೊಡ್ಡಬಸವೇಶ್ವರ್, ಭೂಮಿಕಾ, ಮಲ್ಲಿಕಾರ್ಜುನ, ಅನೂಪ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.