ಕೋವಿಡ್ ನಿಂದ ವೃತ್ತ ಪಟ್ಟ ವಕೀಲರಿಗೆ ಪರಿಹಾರ ನೀಡಲು ಮನವಿ

ಚಿತ್ರದುರ್ಗ. ಜೂ.೩; ರಾಜ್ಯದಲ್ಲಿ ಸುಮಾರು 118 ಜನರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 6 ವಕೀಲರುಗಳು ವೃತ್ತ ಪಟ್ಟಿದ್ದಾರೆ ಆದ್ದರಿಂದ ವಕೀಲರಿಗೆ ಪರಿಹಾರ ನೀಡಬೇಕೆಂದುಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಮಾಧ್ಯಮ ವಿಶ್ಲೇಷಕ ಬಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ಹೇಳಿದರು. ವಕೀಲ ವೃತ್ತಿ ನಡೆಸುವವರು ಸಾರ್ವಜನಿಕವಾಗಿ ಇರಲೇಬೇಕಾಗುತ್ತದೆ ಇವರ ಬಳಿ ಅನೇಕ ಅನೇಕ ಜನರು ನ್ಯಾಯಕ್ಕಾಗಿ ಬರುತ್ತಾರೆ ಆದ್ದರಿಂದ ಇವರನ್ನು ನ್ಯಾಯಾಂಗದ ಅಧಿಕಾರಿ ಎಂದೇ ಪರಿಗಣಿಸಲಾಗಿದೆ ಅವರನ್ನು ಕೋರನ ವಾರಿಯರ್ ಎಂದು ಕೂಡ ಗುರುತಿಸಲಾಗಿದೆ ಇವರ ಬಳಿ ಬಂದ ಕಕ್ಷಿಗಾರ ರಿಂದ ಇವರಿಗೆ ಕೊರೊನಾ ಸೋಂಕು ತಗಲಿ ಇವರ ಕುಟುಂಬಕ್ಕೂ ಕೂಡ ಕೊರೊನಾ ಸೋಂಕು ತಗುಲಿ ಇಡೀ ಕುಟುಂಬಗಳೇ ಪ್ರಾಣ ಕಳೆದುಕೊಂಡಿವೆ. ಅಲ್ಲದೆ ಈ ಕಾರಣದಿಂದ ಅನೇಕ ಯುವ ವಕೀಲರು ಹಾಗೂ ಕೆಲವೊಂದು ಆರ್ಥಿಕ ಸಂಕಷ್ಟದಲ್ಲಿರುವ ವಕೀಲರುಗಳು ಕಷ್ಟದಲ್ಲಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ವಕೀಲರ ಸಂಘಗಳ ಮೂಲಕ ಸಂಕಷ್ಟದಲ್ಲಿರುವ ವಕೀಲರನ್ನು ಗುರುತಿಸಿ ಅವಶ್ಯವಿರುವ ವಕೀಲ ಮಿತ್ರರಿಗೆ ಆರ್ಥಿಕ ಪ್ಯಾಕೇಜನ್ನು ನೀಡಬೇಕಾಗಿ ಆಗ್ರಹಿಸುತ್ತಿದ್ದೇವೆ. ಅಲ್ಲದೆ ಕೊರೊನಾದಿಂದ ಪ್ರಾಣ ಕಳೆದುಕೊಂಡ ವಕೀಲರಿಗೆ ಹಾಗೂ ಅವರ ಕುಟುಂಬದವರಿಗೆ ತಲಾ 30 ಲಕ್ಷ ರೂನಂತೆ ಪರಿಹಾರವನ್ನು ನೀಡಲು ಆಗ್ರಹ ಪಡಿಸುತ್ತಿದ್ದೇನೆ. ಕೂಡಲೇ ಎಲ್ಲಾ ವಕೀಲರ ಕುಟುಂಬಕ್ಕೆ ಕೋವಿಡ್ ವ್ಯಾಕ್ಸಿನ್ ನೀಡಬೇಕೆಂದು ಮನವಿ ಮಾಡಿದರು.