ಕೋವಿಡ್ ನಿಂದ ಮೃತರ ಕುಟುಂಬಸ್ತರ ಮನೆಗೆ ಶಾಸಕ ಪಾಟೀಲ್ ಭೇಟಿ ಸಾಂತ್ವನ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಸೆ.24: ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಈಚೆಗೆ ಕೋವಿಡ್ ದಿಂದಾಗಿ ಮ್ರತ ಪಟ್ಟಿರುವ ಹನ್ನೆರಡಕ್ಕು ಹೆಚ್ಚು ಕುಟುಂಬಸ್ತರ ಮನೆಗೆ ಹುಮನಾಬಾದ ಶಾಸಕ ರಾಜಶೇಖರ ಬಿ. ಪಾಟೀಲ್ ಅವರು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಕೋವಿಡ್ ಮಹಾಮಾರಿ ರೋಗವಾಗಿದ್ದು ಅದರಿಂದ ನಾವೆಲ್ಲರು ಬಹಳ ಜಾಗ್ರತೆ ವಹಿಸುವದು ಮುಖ್ಯವಾಗಿದೆ. ಇದರಲ್ಲಿ ಯಾರು ನಿರ್ಲಕ್ಷತನ ಮಾಡಬಾರದು ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿಯೇ ಅತಿ ಹೆಚ್ಚಿನ ಮನೆಗಳನ್ನು ತರುವ ಕುರಿತು ನಾವು ಸರ್ಕಾರಕ್ಕೆ ಪತ್ರ ಬರೆದು ಕಳುಹಿಸಲಾಗುವದು ಎಂದು ಹೇಳಿದರು. ವಿಶೇಷವಾಗಿ ರಾಜೇಶ್ವರ ಗ್ರಾಮದ ಭೀಮನಗರ್ ನಿವಾಸಿಗಳಿಗೆ ಹೆಚ್ಚಿನ ಮನೆಗಳನ್ನು ನೀಡುವದಾಗಿ ಭರವಸೆ ನೀಡಿದರು. ಈ ಸಂದರ್ಬದಲ್ಲಿ ಮುಖಂಡರಾದ ವೀರಣ್ಣಾ ಪಾಟೀಲ್, ಗ್ರಾಮದ ಮುಖಂಡರಾದ ಶ್ರೀಧರ್ ತೆಲಂಗ್, ಸಂತೋಷ ಸೀಗಿ, ಪ್ರೇಮ್ ಬುಡ್ಕೆ, ಶಾಂತಮ್ಮ ಹೊಸಮನಿ, ಮಂಜುನಾಥ ಹೊಸಮನಿ, ನಾಗಣ್ಣ ಘಾಂಗ್ರೆ, ಹಾಗೂ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಪಾಲ್ಗೋಂಡಿದರು.