ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ನಜ್ಮೀನ್ ಸೇವಾಟ್ರಸ್ಟ್ ಸದಸ್ಯರು

ಕುರುಗೋಡು. ಏ.30  ಸಮೀಪದ ಹಳೆಗೆಣಿಕೆಹಾಳು ಗ್ರಾಮದ ವೀರಶೈವ ಸಮಾಜದ ಮುಖಂಡ ಜಿಎಂ. ಶಾಂತಮೂರ್ತಿಯವರು ಕೋವಿಡ್19 ನಿಂದಾಗಿ ಮೃತಪಟ್ಟ ಹಿನ್ನಲೆಯಲ್ಲಿ ಕುರುಗೋಡಿನ ನಜ್ಮೀನ್ ಸೇವಾಟ್ರಸ್ಟ್‍ನ ಸದಸ್ಯರು  ಸ್ವಯಂಸೇವಕರಾಗಿ ತಾವೇ ಮುಂದೆನಿಂತು ಕೋವಿಡ್‍ನಿಯಮ ಪ್ರಕಾರವಾಗಿ ಪಿಪಿ ಕಿಟ್‍ಧರಿಸಿ ರವಿವಾರ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. 
ಕೋವಿಡ್19 ನಿಂದ ಮೃತಪಟ್ಟ ವ್ಯಕ್ತಿಯನ್ನು ದೂರದಿಂದ ನೋಡಿ ಭಯಪಡುವ ಈ ಕಾಲದಲ್ಲಿ ಕುರುಗೋಡಿನ ನಜ್ಮೀನ್ ಸೇವಾಟ್ರಸ್ಟ್‍ನ ಸದಸ್ಯರಾದ  ವಾಟರ್‍ಪಿಲ್ಟರ್‍ನ ಮೆಹಬೂಬ್, ದೂದ್‍ಪೀರ್, ಅಮೀನ್, ಶರ್ಮಾಸ್‍ವಲಿ, ಅಜೀಜ್, ವದ್ದಟಿಮೆಹಬೂಬ್ ರವರು ಸ್ವಯಂಪ್ರೇರಿತರಾಗಿ ಗೆಣಿಕೆಹಾಳು ಗ್ರಾಮಕ್ಕೆ ತೆರೆಳಿ ಕೋವಿಡ್ ನಿಯಮದ ಪ್ರಕಾರ ಕಿಟ್‍ದರಿಸಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.