ಕೋವಿಡ್ ನಿಂದ ಮಾಜಿ ಪ್ರಧಾನಿ ಡಾ .ಸಿಂಗ್ ಗುಣಮುಖ: ಬಿಡುಗಡೆ

ನವದೆಹಲಿ, ಏ.29- ಕೋರೋನಾ ಸೋಂಕು ತಗುಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಡಾ.‌ಮನಮೋಹನ್ ಸಿಂಗ್ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

88 ವರ್ಷದ ಡಾ. ಸಿಂಗ್ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು.

ಗುಣಮುಖರಾದ ಬಳಿಕ ಡಾ. ಸಿಂಗ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಾರ್ಚ್‌ 4 ಮತ್ತು ಏಪ್ರಿಲ್ 3 ರಂದು ಕೋವಾಕ್ಸಿನ್ ಲಸಿಕೆ ಪಡೆದಿದ್ದರು. ಎರಡು ಡೋಸ್ ಲಸಿಕೆ ಪಡೆದ ನಂತರವೂ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು.

ಕೊರೋನಾ ಸೋಂಕು ಕಾಣಿಸಿಕೊಳ್ಲುವುದಕ್ಕೂ ಮುನ್ನ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಐದು ಸಲಹೆ ನೀಡಿದ್ದರು.

ಸಲಹೆಯನ್ನು ಪಾಲಿಸುವುದನ್ನು ಬಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷವರ್ಧನ್ ಮೂಲಕ ಸಲಹೆ ನೀಡಿದ ಡಾ .ಸಿಂಗ್ ಅವರಿಗೆ ತಿರುಗೇಟು ನೀಡುವ ಕೆಲಸ ಮಾಡಿತ್ತು