ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 10 ಲಕ್ಷ ರೂ ಠೇವಣಿ, ಉಚಿತ ಶಿಕ್ಷಣ

The Prime Minister, Shri Narendra Modi addressing at the webinar for effective implementation of Union Budget in Defence Sector, in New Delhi on February 22, 2021.

ನವದೆಹಲಿ, ಮೇ.29- ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 10 ಲಕ್ಷ ರೂಪಾಯಿ ಠೇವಣಿ, ಉಚಿತ ಶಿಕ್ಷಣ, ಉಚಿತ ಆರೋಗ್ಯ ವಿಮೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಕಟಿಸಿದ್ದಾರೆ.

ಪಿಎಂ- ಕೇರ್ಸ್ ನಿಧಿಯಿಂದ ಅನಾಥರಾದ ಮಕ್ಕಳ ಹಿತ ಕಾಯುವ ಕೆಲಸ ಮಾಡಲಾಗುವುದು. ಪೋಷಕರು ಕೋವಿಡ್ ನಿಂದ ಬದುಕುಳಿದಿದ್ದರೆ ಅಥವಾ ಪೋಷಕರು ಇಲ್ಲದಿದ್ದರೆ ಅವರ ಪಾಲಕರಿಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪೋಷಕರನ್ನು ಕಳೆದುಕೊಂಡ ಮಕ್ಕಳ ಹಿತ ಕಾಯುವ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಈ ವಿಷಯ ಪ್ರಕಟಿಸಿದ್ದಾರೆ.

5 ಲಕ್ಷ ಆರೋಗ್ಯ ವಿಮೆ:

ಅನಾಥರಾದ ಮಕ್ಕಳಿಗೆ ಆಯುಷ್ ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿ ವೈದ್ಯಕೀಯ ವಿಮೆ ಮಾಡಿಸಲಾಗುವುದು .ಈ ಮೊತ್ತ ಮಕ್ಕಳು 18 ವರ್ಷ ತುಂಬಿದ ನಂತರ ಮಕ್ಕಳು ಅದನ್ನು ಪಡೆ್ದುಕೊಳ್ಳಬಹುದು .ಈ ಮೊತ್ತವನ್ನು ಪಿಎಂ ಕೇರ್ಸ್ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದರ ಜೊತೆಗೆ 10 ಲಕ್ಷ ರೂಪಾಯಿ ಠೇವಣಿ ನೀಡಲಾಗುವುದು.ಮೊತ್ತ ಅನಾಥ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿ್ದೆದೆ. ಜೊತೆಗೆ ಉನ್ನತ ಶಿಕ್ಷಣ ದ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಪ್ರಕಟಿಸಿದರು.

5 ವರ್ಷದಿಂದ 23 ವರ ವಯಸ್ಸಿನ ತನಕ ಅನಾಥ ಮಕ್ಕಳ ಶಿಕ್ಷಣ ಜವಾಬ್ದಾರಿ ನೋಡಿಕೊಳ್ಳಲಾಗುವುದು ಇದರಿಂದ ಭಯ ಆತಂಕ ಬೇಡ ಎಂದು ತಿಳಿಸಿದ್ದಾರೆ.

ಕೆವಿಗಳಲ್ಲಿ ಪ್ರವೇಶ:

ಕೊವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಮೀಪದ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

11 ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗಾಗಿ ನವೋದಯ, ಸೈನಿಕ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಿ ಅವರಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ