ಕೋವಿಡ್ ನಡುವೆ ಬ್ಯಾಂಕ್ ಪಗ್ರತಿ


ಗುಳೇದಗುಡ್ಡ ಡಿ.24- ಪಟ್ಟಣದ ಪ್ರತಿಷ್ಟಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಕೋವಿಡ್-19 ರ ಬಿಕ್ಕಟ್ಟಿನ ನಡುವೆಯೂ ಸಹ ಬ್ಯಾಂಕು ಪ್ರಸಕ್ತ ವರ್ಷದಲ್ಲಿ ರೂ. 59.78 ಲಕ್ಷ ಲಾಭ ಗಳಿಸಿದೆ ಎಂದು ಮಾಜಿ ಶಾಸಕರು, ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಶೀಲವಂತ ಹೇಳಿದರು.
ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಭವನದಲ್ಲಿ ಕೋವಿಡ್-19 ರ ಸರಕಾರದ ಮಾರ್ಗಸೂಚಿಯಂತೆ ವರ್ಚುವಲ್ ಮೀಟಿಂಗ್ ಮೂಲಕ ಜರುಗಿದ ಬ್ಯಾಂಕಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಆರ್.ಎಮ್. ಕಬಾಡಿ ಅವರು ಹಿಂದಿನ ಮಹಾಸಭೆಯ ನಡುವಳಿಕೆಗಳನ್ನು ಮತ್ತು ಸನ್ 2019-20 ರ ಲಾಭ-ಹಾನಿ, ಅಢಾವೆ ಹಾಗೂ ಜಮಾ ಖರ್ಚುಗಳನ್ನು ಓದಿ ಹೇಳಿದರು ಮತ್ತು ಸನ್ 2020-21 ರ ಅಂದಾಜು ಪತ್ರಿಕೆಗೆ ಹಾಗೂ ಸನ್ 2019-20 ರಲ್ಲಿ ಅಂದಾಜಿಗಿಂತ ಹೆಚ್ಚು ಆದ ಖರ್ಚು ವೆಚ್ಚಗಳಿಗೆ ಸಭೆಯ ಅನುಮತಿ ಪಡೆದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಉತ್ತಮ ವ್ಯವಹಾರ ಹೊಂದಿದ ಗ್ರಾಹಕರನ್ನು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ (ಕಲಾ ವಾಣಿಜ್ಯ ವಿಜ್ಞಾನ ವಿಭಾಗ) ಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.