ಕೋವಿಡ್ ನಂತರ ಹೆಚ್ಚಾಗುತ್ತಿದೆ ಮಾನಸಿಕ ಅನಾರೋಗ್ಯ; ಡಾ.ಸಿ.ಆರ್ ಚಂದ್ರಶೇಖರ್

ದಾವಣಗೆರೆ. ಏ.೧೫; ಕೋವಿಡ್ ನಂತರ ಮಾನಸಿಕ ಅನಾರೋಗ್ಯ ಮೊದಲ ಸ್ಥಾನಕ್ಕೆ ಬಂದಿದೆ. ಎಲ್ಲಾ ಕಡೆ ಖಿನ್ನತೆಯ ಕಾಯಿಲೆ ಆವರಿಸಿದೆ.ಕೋವಿಡ್ ನಂತರ ಜನ ಜೀವನ ಅಸ್ತವ್ಯಸ್ತವಾಗಿದೆ.
ಮನಸ್ಸು ನಮ್ಮ ಬಂಧನಕ್ಕೆ ಹಾಗೂ ಮುಕ್ತಗೆ ಕಾರಣ. ಆದ್ದರಿಂದ ನಮ್ಮ ಮನಸ್ಸನ್ನು ಉಲ್ಲಸಿತವಾಗಿಡಬೇಕು ಎಂದು ಬೆಂಗಳೂರಿನ ಖ್ಯಾತ ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ್ ಸಲಹೆ ನೀಡಿದರು.
ದಾವಣಗೆರೆ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾನಸಿಕವಾಗಿ ಕ ಆರೋಗ್ಯದ ಕುರಿತು ಅವರು ಮಾತನಾಡಿದರು ದೈಹಿಕ ಆರೋಗ್ಯಕ್ಕೆ ಮಾನ್ಯತೆ ನೀಡಿದಂತೆ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯಕ್ಕೂ ಒತ್ತು ನೀಡಬೇಕು.ಇಂದು
ಶೇ ೮೦ ರಷ್ಟು ಜನರು ದೈಹಿಕ ಖಾಯಿಲೆಯಿಂದ  ಬಳಲು ಕಾರಣ ಮನಸ್ಸು. ಪ್ರಸನ್ನಕಾಯ ಮನಸ್ಸು ,ಪ್ರಸನ್ನ ಆತ್ಮ ಇರಬೇಕು ಎಂದರು.
ಮಾನಸಿಕ ಖಾಯಿಲೆಗಳ ಬಗ್ಗೆ ಸಾಕಷ್ಟು ಪೂರ್ವಾಗ್ರಹ ಪೀಡಿತ ನಂಬಿಕೆಗಳಿವೆ.ದೆವ್ವ,ಭೂತ,ಮಾಟಮಂತ್ರ,
ಜಾತಕ ದೋಷ ಇಂತಹ ಅತೀ ಮಾನವ ಮೂಢನಂಬಿಕೆಗಳಿಗೆ ನಾವು ಬಲಿಯಾಗುತ್ತಿದ್ದೇವೆ.ಮನೋರೋಗಕ್ಕೆ ಮದ್ದಿಲ್ಲ ಎನ್ನುತ್ತಾರೆ. ಚಿಂತೆ ವ್ಯಥೆ, ಭಯ ಕೋಪ ಆಸೆ ನಿರಾಸೆ ಹತಾಶೆ ಇವೇ ಶೇ. ೮೦ ರಷ್ಟು ಮನೋರೋಗಕ್ಕೆ ಕಾರಣವಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಬೆಂಗಳೂರು- ದಾವಣಗೆರೆಯಂತಹ ಮಹಾ ನಗರಗಳಲ್ಲಿ‌  ಬಿಪಿ, ಶುಗರ್, ಥೈರಾಯ್ಡ್, ಕ್ಯಾನರ್ ಹೆಚ್ಚಾಗಿ ಕಂಡುಬರುತ್ತಿದೆ. ಶೇ ೮೦ ರಷ್ಟು ಜನರಿಗೆ ರೋಗನಿರೋಧಕ‌ಶಕ್ತಿ ಇಲ್ಲವಾಗಿದೆ ಹಾಗೂ
ಮನಸ್ಸಿನ‌ ಆರೋಗ್ಯದ ಬಗ್ಗೆ ಸಾಕಷ್ಟು ಪರಿಣಾಮ ಬೀರಿದೆ.ಹಿಂದೆಲ್ಲಾ ಹೆಚ್ಚಿನ ಮಾನಸಿಕ ಸಮಸ್ಯೆಗಳನ್ನು ಜನ ಗುರುತಿಸುತ್ತಿರಲಿಲ್ಲ ಅನುಭವಿಸುತ್ತಿದ್ದರು. ಕಳೆದ ೫೦ ವರ್ಷದಲ್ಲಿ‌ ಮನೋವಿಜ್ಞಾನ ಸಾಕಷ್ಟು ಬೆಳೆದಿದೆ.ಇಂದು ಮನೋರೋಗಕ್ಕೆ ಪರಿಣಾಮಕಾರಿ‌ ಔಷಧಿಗಳಿವೆ ಈ ಬಗ್ಗೆ ನಾನು ಕೂಡ ಆರೋಗ್ಯ ಕ್ಷೇತ್ರದಲ್ಲಿ ೬೦೦ ಕ್ಕೂ ಹೆಚ್ವು ಪುಸ್ತಕ ಬರೆದಿದ್ದೇನೆ.
ಅತೀಯಾದ ಮೊಬೈಲ್ ಬಳಕೆಯೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.
ಇಂದಿಗೂ ಖಿನ್ನತೆ ಒಪ್ಪಿಕೊಳ್ಳಲು  ಜನರು ತಯಾರಿಲ್ಲ ಹಾಗೂ‌ ಚಿಕಿತ್ಸೆಗೂ‌ ಮುಂದಾಗುತ್ತಿಲ್ಲ.
ಮಾನಸಿಕ ಖಾಯಿಲೆಗಳನ್ನು  ಜನರು ಒಪ್ಪಿಕೊಳ್ಳಲು‌ ಹಿಂಜರಿಯುತ್ತಿದ್ದಾರೆ.ನಮ್ಮ ರಾಜ್ಯದಲ್ಲಿ ೩೦೦ ಕ್ಕೂ‌ ಹೆಚ್ಚು ಮನೋವೈದ್ಯರಿದ್ದಾರೆ. ಅತೀಯಾದ ನಿರೀಕ್ಷೆ ಕಾರ್ಯದೊತ್ತಡ ಮಾನಸಿಕ ಖಾಯಿಲೆಗೆ ಕಾರಣವಾಗುತ್ತಿದೆ.ಇತ್ತೀಚೆಗೆ
೧೩೦೦ ರಿಂದ ೧೫೦೦ ಜನರು ಮಾನಸಿಕ ಖಾಯಿಲೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ.
ಎಲ್ಲಾ ದೇಶಗಳಲ್ಲಿ ಸೈಕಿಯಾಟ್ರಿಕ್ ವಿಷಯ ಪ್ರತ್ಯೇಕ ಇರುತ್ತದೆ ಆದರೆ ಭಾರತದಲ್ಲಿ ಆ ರೀತಿ‌ಇಲ್ಲ..ಇತ್ತೀಚೆಗೆ ಬದಲಾವಣೆ ಕಾಣುತ್ತಿದ್ದೇವೆ. ಕಳೆದ ಕೆಲ ವರ್ಷಗಳಿಂದ ಮಾನಸಿಕ ಆರೋಗ್ಯದ ಅರಿವು ಮೂಡಿಸುತ್ತಿದ್ದೇವೆ.  ರಾಜ್ಯದ ೩೧ ಜಿಲ್ಲೆಗಳಲ್ಲಿ ಮನೋವೈದ್ಯಕೀಯ ವಿಭಾಗ ಇದೆ.ದೈಹಿಕ ಆರೋಗ್ಯದಷ್ಟೇ ಮಾನಸಿಕ‌ ಆರೋಗ್ಯ ಮುಖ್ಯ.ಮನಸ್ಸು ಪ್ರಫುಲ್ಲವಾಗಿದ್ದರೆ ಒತ್ತಡ,ಅನಾರೋಗ್ಯ ಕಾಡುವುದಿಲ್ಲ.
ಮನಸ್ಸಿನ ಆರೋಗ್ಯ ಬಹಳ ಮುಖ್ಯ. ಆಲೋಚನೆಗಳು‌  ಸಕಾರಾತ್ಮಕವಾಗಿರಬೇಕು ಎಂದರು.ಅತೀಯಾದ ಒತ್ತಡದಿಂದ ಜನರಲ್ಲಿ
ಧೈರ್ಯ ಕಡಿಮೆಯಾಗುತ್ತಿದೆ.ದಾಂಪತ್ಯ ವಿರಸ ಹೆಚ್ಚಾಗುತ್ತಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ತಿಂಗಳಿಗೆ ಹತ್ತುಸಾವಿರಕ್ಕೂ ಹೆಚ್ಚು ಡೈವರ್ಸ್ ಕೇಸ್ ಗಳು ದಾಖಲಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ವೇಳೆ ಹೋಮಿಯೋಪಥಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಜಿ.ಎಫ್.ಮಾವಿಶೆಟ್ಟರ್,
ಪ್ರಧಾನ ಕಾರ್ಯದರ್ಶಿ ಡಾ.ಎ.ಎನ್ ಸುಂದರೇಶ್ , ಪ್ರಭುದೇವ್, ಡಾ.ಕೆ.ಆರ್ ಶರತ್ ರಾಜ್,ಡಾ.ಹೆಚ್.ಎಸ್ ಪಾಂಡುರಂಗ, ಡಾ.ಜಿ.ಎಸ್ ಗಿರೀಶ್ ಉಪಸ್ಥಿತರಿದ್ದರು.