ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಸಕ್ರೀಯ ಭಾಗಿಯಾಗಿದ್ದೇವೆ: ರಾಮಚಂದ್ರನ್ ಆರ್

ಬೀದರ:ಮೇ.1: ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಲ್ಲಿ ಕಾರ್ಯಪ್ರವೃತ್ತರಾಗಿ ಜಿಲ್ಲೆಯಲ್ಲಿ ಕೋವಿಡ್-19 ತಡೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಮೊನ್ನೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೊದಲಿಗೆ ಬೀದರ ಜಿಲ್ಲೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.

ಬೀದರ ಜಿಲ್ಲೆಯಲ್ಲಿ 9 ಕೋವಿಡ್ ಕೇರ್ ಸೆಂಟರಗಳಿವೆ. 1090 ಕೋವಿಡ್ ಬೆಡ್‍ಗಳು ಲಭ್ಯವಿದೆ. ಕೋವಿಡ್ ಪಾಜಿಟೀವ್ ಇರುವ ಬಹಳಷ್ಟು ಜನರನ್ನು ಅವರು ಇಚ್ಚಿಸಿದಂತೆ ಹೋಮ್ ಐಸೋಲೇಶನ್‍ದಲ್ಲಿ ಇಡಲಾಗಿದೆ. ಅವರ ಆರೋಗ್ಯದ ಬಗ್ಗೆ ಪ್ರತಿದಿನ ನಿಗಾ ವಹಿಸಲಾಗುತ್ತಿದೆ. ಕ್ವಾರಂಟೈನ್ ವಾಚ್, ಐಸೋಲೇಷನ್ ವಾಚ್ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಬೀದರ ಜಿಲ್ಲೆಯಲ್ಲಿ ಬೀದರ ನಗರಸಭೆ ಚುನಾವಣೆ, ಬಸವಕಲ್ಯಾಣ ಉಪಚುನಾವಣೆ ಕಾರ್ಯಗಳು ನಡೆದಿವೆ. ಈ ಮಧ್ಯೆಯೇ ಪ್ರತಿ ದಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿಡಿಯೋ ಸಂವಾದ ನಡೆಸಿ ಕೋವಿಡ್ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಬೀದರ ಗಡಿ ಜಿಲ್ಲೆಯಾಗಿರುವ ಕಾರಣಕ್ಕೂ ಇಲ್ಲಿ ಪ್ರPರಣಗಳು ಹೆಚ್ಚುತ್ತಿವೆ. ಈಗಾಗಲೇ ಚೆಕ್‍ಪೆÇೀಸ್ಟ್ಗಳನ್ನು ಹಾಕಿ ಕ್ರಮ ವಹಿಸಲಾಗುತ್ತಿದೆ. ಮತ್ತು ರ್ಕಾರದ ಮಾರ್ಗಸೂಚಿ ಎಲ್ಲವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ಬ್ರಿಮ್ಸ್ ಕೋವಿಡ್ ಆಸ್ಪತೆಯು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲಿ ಮತ್ತೀಗ ಹೋಮ್ ಗಾಡ್ಸ್ಗಳನ್ನು ನಿಯೋಜಿಸಲಾಗಿದೆ. ಎಲ್ಲಾ ವಾರ್ಡುಗಳಲ್ಲಿ ಸಿ.ಸಿ. ಟಿವಿ ಕ್ಯಾಮರಾಗಳನ್ನು ಅಳವಡಿಸಿ, ಅಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲು ವಿಡಿಯೋ ವಿಂಗ್ ಟೀಂನ್ನು ಇಟ್ಟು, ಅಲ್ಲಿ ಕ್ರಮಬದ್ಧವಾಗಿ ಕೆಲಸ ಮಾಡಿಸಲಾಗುತ್ತಿದೆ. ಮುಖ್ಯವಾಗಿ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಶಿಸ್ತುಗೊಳಿಸುವುದು, ಪಾಳಿ ಪ್ರಕಾರ ಕರ್ತವ್ಯಕ್ಕೆ ಹಾಜರಾಗಿ ಕಡ್ಡಾಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಕೆಲಸ ಮಾಡುವಂತೆ ತಿಳಿಸಲಾಗಿದೆ.

ರೆಮ್‍ಡಿಸಿವರ್ ಇಂಜೆಕ್ಷನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ರೆಮ್‍ಡಿಸಿವರ್ ಸಕಾಲಕ್ಕೆ ಬರುವಂತೆ ನೋಡಿಕೊಳ್ಳಲು ಒಂದು ವಾರ್ ರೂಮ್‍ನ್ನು ಸ್ಥಾಪಿಸಿ ಅಲ್ಲಿ ನೋಡಲ್ ಅಧಿಕಾರಿಯನ್ನು ಕೂಡಿಸಿ ಆ ಬಗ್ಗೆ ಗಮನ ಹರಿಸಲು ಅವರಿಗೆ ಸೂಚಿಸಲಾಗಿದೆ. ರೆಮಡಿಸಿವರ್ ಬೆಂಗಳೂರಿನಿಂದ ಬೀದರಗೆ ಬರುವುದಕ್ಕೆ ಕನಿಷ್ಠ 18 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಇದು ಬೇಗ ನಮ್ಮ ಕೈಗೆ ಸಿಗುವಂತೆ ಮಾಡಲು ಅದನ್ನು ವಿಮಾನಗಳ ಮೂಲಕ ತೆಗೆದುಕೊಂಡು ಬರುವಂತಹ ವ್ಯವಸ್ಥೆ ಮಾಡಿದ್ದೇವೆ.

ಜಿಲ್ಲೆಯಲ್ಲಿ ರೋಗಿಗಳ ಅವಶ್ಯಕತೆಗೆ ತಕ್ಕಂತೆ ಆಕ್ಸಿಜನ್ ಬೆಡ್‍ಗಳು, ವೆಂಟಿಲೇಟರ್ ವ್ಯವಸ್ಥೆ ಮಾಡುತ್ತ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಎಷ್ಟು ಆಕ್ಸಿಜನ್ ಬೆಡ್‍ಗಳು ಲಭ್ಯ ಇದೆ ಎನ್ನುವಂತಹ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ಅಳವಡಿಸಿ ಜನರಿಗೆ ಧ್ಯೆರ್ಯ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲಿಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ.

ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿದ್ದೇವೆ. ಆಕ್ಸಿಜನ್ ಸಿಲೆಂಡರ್‍ಗಳ ಕೊರತೆ ಇರುವುದರಿಂದ ಅಗತ್ಯ ಸಂಖ್ಯೆಯಲ್ಲಿ ಹೊಸ ಸಿಲೆಂಡರಗಳ ಖರೀದಿ ಮಾಡಲಾಗಿದೆ. ಅವು ಗುಜರಾತ್‍ನಿಂದ ಬರುತ್ತಿವೆ. ಖಾಸಗಿ ಟ್ಯಾಂಕರ್ ಅವರೊಂದಿಗೂ ಮಾತುಕತೆ ನಡೆಸಿ ಅವರಿಂದ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ಬೀದರ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಝನರೇಷನ್ ಪ್ಲಾಟ್‍ಗಳು ಇರುವುದಿಲ್ಲ. ಇಲ್ಲಿ 14 ಕಿಲೋಲೀಟರ್ ಟ್ಯಾಂಕ್ ಮಾತ್ರ ಇದೆ. ರೀಫಿಲಿಂಗ್ ಯೂನಿಟ್ ಕೂಡ ಬೀದರನಲ್ಲಿ ಇಲ್ಲ. ಜಿಂಬೋ ಸಿಲೆಂಡರಗಳನ್ನು ರಿ-ಫಿಲ್ಲಿಂಗ್‍ಗೊಳಿಸಲು ಹೈದ್ರಾಬಾದ್ ಇಲ್ಲವೇ ಕಲಬುರಗಿಗೆ ಹೋಗುವಂತಹ ಸ್ಥಿತಿ ಇದೆ. ದಿನನಿತ್ಯ ಕೆಲಸ ಹಂಚಿಕೆ ಮಾಡಿ ಈ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಬೀದರ ಜಿಲ್ಲೆಯಲ್ಲಿಯೇ ರೀಫಿಲಿಂಗ್ ಪ್ಲಾಂಟ್ ನಡೆಸಲಿಕ್ಕೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಜಿಂಬೋ ಸಿಲೆಂಡರನ್ನು ರೀಫಿಲಿಂಗ್ ಮಾಡುವ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಆಕ್ಸಿಜನ್, ರೇಮ್‍ಡಿಸಿವರ್ ಪೂರೈಕೆಯಲ್ಲಿ ಕೊರತೆ ಕಂದುಬಂದಲ್ಲಿ ಯಾರ ಬಳಿಯಲ್ಲಿ ಹೆಚ್ಚಿಗೆ ಲಭ್ಯವಿದೆಯೋ ಅವರಲ್ಲಿ ತಕ್ಷಣ ಪಡೆದು ರೋಗಿಗಳಿಗೆ ನೀಡಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ.

ಜಿಲ್ಲೆಯಲ್ಲಿ ಸಿ.ಸಿ.ಸಿ. ಸೆಂಟರ್ ನಿರ್ಮಾಣ ಮಾಡಿದ್ದೇವೆ. ಪ್ರತಿದಿನ ಕೂಡ ಸರ್ಕಾರದ ಮಾರ್ಗಸೂಚಿ ಅನ್ವಯ 250 ರೂಪಾಯಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ಹಣ್ಣು, ರಾತ್ರಿ ಊಟ ಪೂರೈಕೆ ಮಾಡುವುದನ್ನು ವ್ಯವಸ್ಥಿತವಾಗಿ ಮಾಡಿಸಲಾಗುತ್ತಿದೆ.

ಕೋವಿಡ್ ಲಸಿಕೆ ನೀಡಿಕೆ ಕಾರ್ಯವನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳ ಸಹಕಾರ ಪಡೆದು ಪ್ರತಿ ತಾಲೂಕಿನಲ್ಲಿ ಲಸಿಕೆ ನೀಡಲು ಒತ್ತು ಕೊಟ್ಟಿದ್ದೇವೆ. ಒಟ್ಟಿನಲ್ಲಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ನಾವೆಲ್ಲ ಅಧಿಕಾರಿಗಳು ಸೇರಿ, ಜನಪ್ರತಿನಿಧಿಗಳ ಸಲಹೆ-ಸಹಕಾರ ಪಡೆದುಕೊಂಡು ಅವರೂ ಸೇರಿದಂತೆ ಎಲ್ಲರೂ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.