ಕೋವಿಡ್ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ : ಕಾಶಪ್ಪನವರಬಾಗಲಕೋಟೆ, ಮೇ.30 : ರಾಜ್ಯದಲ್ಲಿ ವಿಪರೀತವಾಗಿ ಕೋವಿಡ್-19ದಿಂದ ಜನ ಮರಣಹೊಂದುತ್ತಿದ್ದಾರೆ ಆಸ್ಪತ್ರೆಗೆ ಹೋದವರು ಮನೆಗೆ ಮರಣವಾಗಿ ಬರುತ್ತಿರುವುದರಿಂದ ಜನ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕ ಮೂಡಿದೆ ಈ ಕೋವಿಡ್ ಅಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ನವನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಸರ್ಕಾರದಿಂದ ಬಂದ ಲಸಿಕೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ರೋಗದಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಜನರು ಭಯದಿಂದಲೇ ಹೃದಯಾಘಾತದಿಂದ ಮೃತಪಟ್ಟ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ ಎಂದರು.
ವೈದ್ಯರು ಈ ಸಂದರ್ಭದಲ್ಲಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು ಮತ್ತು ಜನರ ಆರೋಗ್ಯದ ದೃಷ್ಠಿಯಿಂದ ಆಸ್ಪತ್ರೆಯಲ್ಲಿ ರೋಗಿಯನ್ನು ಗುಣಪಡಿಬೇಕು ದುಡ್ಡಿಗಾಗಿ ವೈದ್ಯರು ತಮ್ಮ ವೃತ್ತಿಗೆ ಕಳಂಕತರಬಾರದು ವೈದ್ಯರನ್ನು ವೈದ್ಯನಾರಾಯನೋಭವ ಎಂದು ಕರೆಯುತ್ತೇವೆ ಅದ್ದರಿಂದ ವೈದ್ಯರು ಜನರ ಜೀವ ರಕ್ಷಣೆ ಮಾಡಬೇಕು ಎಂದು ಹೇಳಿದರು.
ವೈದ್ಯರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಒಬ್ಬರೋಗಿಗೆ 4ರಿಂದ 5ಲಕ್ಷದವರೆಗೆ ಬಿಲ್ ಮಾಡುತ್ತಾರೆ ಅಂತಹ ಡೋಜ್ ಏನಿರುತ್ತಿದೆ ಎಂದು ಕಿಡಿಕಾರಿದರು ಆಸ್ಪತ್ರೆಯಲ್ಲಿ ದುಡ್ಡುಕಟ್ಟುವವರೆಗೆ ಮೃತ ದೇಹಗಳನ್ನು ಕೊಡದ ಆಸ್ಪತ್ರೆಗಳೂ ಇವೆ ಅವಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಪ್ರತಿ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಇದರಿಂದ ರೋಗಿಯ ಸಂಬಂಧಿಕರಿಗೂ ಪ್ರಾತ್ಯಕ್ಷಿಕೆ ಕಂಡುಬರುತ್ತದೆ ಇದರ ಕಡೆ ಸರಕಾರ ಗಮನಹರಿಸಬೇಕು ಇಲ್ಲವಾದಲ್ಲಿ ಆ ಕಾರ್ಯವನ್ನು ಮುಂದೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ರಾಜ್ಯದಲ್ಲಿ ಲಾಕ್‍ಡೌನ್‍ದ ಅವಧಿ ಮುಂಜಾಅನೆ 6ರಿಂದ10 ಗಂಟೆಯವರೆಗೆ ಮಾಡಿರುವುದರಿಂದ ಕೂಲಿಕಾರ್ಮಿಕರಿಗೆ ರೈತರಿಗೆ ಬೀಜ ಗೊಬ್ಬರ ತರಲಿಕ್ಕೆ ತೊಂದರೆಯಾಗಿದೆ ಕಾರಣ ಗ್ರಾಮೀಣ ಪ್ರದೇಶಗಳಿಂದ ಪಟ್ಟಣಗಳಿಗೆ ಹೋಗಿಬರಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಮೆಡಿಸಿನ್‍ಗಳನ್ನು ಹೊಂದಿರುವ ಕೋವಿಡ್ ಕಿಟ್‍ಗಳನ್ನು ಪತ್ರಕರ್ತರಿಗೆ ವಿತರಿಸಿದರು.
ಕೋವಿಡ್ ನೊಂದಿಗೆ ಜನ ಹೋರಾಟ ಮಾಡುತ್ತಿದ್ದರೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಖುರ್ಚಿಗಾಗಿ ಗುದ್ದಾಟ ನಡೆಸುತ್ತಿದೆ ಜನರು ಕೋವಿಡ್ ಸೋಂಕಿನೊಂದಿಗೆ ಹೋರಾಟ ಮಾಡುತ್ತಿದ್ದರೆ ಎಲ್ಲೋ ಮೂಲೆಯಲ್ಲಿ ಕುಳಿತು ಮುಖ್ಯಮಂತ್ರಿ ಖುರ್ಚಿಗೆ ಗುದ್ದಾಟ ಮಾಡುತ್ತಿದೆ ವಿರೋಧ ಪಕ್ಷದವರಾದ ನಾವು ಜನರ ಪ್ರಾಣ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದರೆ ಬಿಜೆಪಿ ಪಕ್ಷದವರು ರಾಜ್ಯದಲ್ಲಿ ಖುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಜನರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ತುರ್ತುಪರಸ್ಥಿತಿಯಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕೋವಿಡ್ ಮೂರನೇ ಅಲೆ ಹೆಚ್ಚಾಗುವ ಬೆನ್ನಲ್ಲೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಕಾಗಿದೆ ಇಲ್ಲವಾದರೆ ಜನರು ಮತ್ತಷ್ಟು ಸಂಕಷ್ಟ ಅನುಭವಿಸಬೆಕಾಗುತ್ತದೆ ಕೋವಿಡ್ ಮೊದಲನೆ ಅಲೆಯಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಕೋವಿಡ್ 2ನೇ ಅಲೆಯ ಭೀತಿ ಕಾಡುತ್ತಿರಲಿಲ್ಲ ಈಗ ಜನರಿಗೆ ಮತ್ತೊಂದು ಸಂಕಟ ಕಾಡುತ್ತಿದೆ ಬ್ಲ್ಯಾಕ್ ಫಂಗಸ್ ಮತ್ತು ವೈಟ್ ಫಂಗಸ್ ಮತ್ತು ಕೋವಿಡ್ ಮೂರನೇ ಅಲೆ ಜನರ ಆತಂಕಕ್ಕೆ ಎಡೆಮಾಡಿದೆ ಎಂದರು.
ಬಿಜೆಪಿ ಸರಕಾರದ ಮೇಲೆ ಏಕೋ ನಮಗೆ ಸಂದೇಹ ಪ್ರಾರಂಭವಾಗಿದೆ ಸಿಎಂ ಯಡಿಯೂರಪ್ಪನವರ ಖುರ್ಚಿ ಅಲುಗಾಡಿಸಿದಂತೆ ನಾಟಕವಾಡಿ ಜನರ ಮನಸ್ಸನ್ನು ರಾಜಕೀಯ ಕಡೆ ಸೆಳೆಯುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ ಏನೇ ಇರಲಿ ರಾಜ್ಯ ಸರ್ಕಾರ ಜನರ ಆರೋಗ್ಯ ಹಾಗೂ ಭವಿಷ್ಯದ ಕಡೆ ಗಮನ ಹರಿಸಿ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ಮತ್ತು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.