ಕೋವಿಡ್ ತಡೆಗೆ ಲಸಿಕೆ ಅಸ್ತ್ರ

ಬ್ಯಾಡಗಿ, ಜೂ 6: ಕೋವಿಡ್ ಸೋಂಕು ತಡೆಗೆ ಲಸಿಕೆಯೊಂದೇ ಅಸ್ತ್ರವಾಗಿದ್ದು, ಎಲ್ಲರಿಗೂ ಲಸಿಕೆಯನ್ನು ನೀಡುವ ಮೂಲಕ ಕೋವಿಡ್ ಸೋಂಕನ್ನು ತಡೆಯಬಹುದಾಗಿದೆ ಎಂದು ಕಾಗಿನೆಲೆ ನಾಡಕಚೇರಿಯ ಉಪತಹಶೀಲ್ದಾರ ರವಿ ಭೋಗಾರ ಹೇಳಿದರು.

ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಆರೋಗ್ಯ, ಕಂದಾಯ, ಪೆÇಲೀಸ್ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ನಡೆಸಲಾದ ಕೋವಿಡ್ ಸೋಂಕಿನ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮದೆಲ್ಲೆಡೆ ಸಂಚರಿಸಿ ಗ್ರಾಮಸ್ಥರಿಗೆ ಕೋವಿಡ್ ಸೋಂಕಿನ ಲಕ್ಷಣಗಳ ಕುರಿತು ವಿವರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಲ್ಲದೇ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಲು ಮನವಿ ಮಾಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೌಸ್’ಮೊಹಿದ್ದೀನ ತಹಶೀಲ್ದಾರ ಮಾತನಾಡಿ, ಘಾಳಪೂಜಿ ಗ್ರಾಮದಲ್ಲಿ ನಡೆಸಿದ ಶಿಬಿರದಲ್ಲಿ 214ಜನರಿಗೆ ಕೋವಿಡ್ ತಪಾಸಣೆಯನ್ನು ಮಾಡಲಾಗಿದೆ ಎಂದು ತಿಳಿಸಿದರಲ್ಲದೇ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ರಕ್ಷಣೆಯತ್ತ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಕಾಗಿನೆಲೆ ಪೆÇಲೀಸ್ ಠಾಣೆಯ ಪಿಎಸೈ ಡಿ.ಬಿ.ಬಳಿಗಾರ, ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರ, ಗ್ರಾಮ ಲೆಕ್ಕಾಧಿಕಾರಿ ಬಿ.ಎನ್.ಖವಾಸ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.