ಕೋವಿಡ್ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ತಹಶೀಲ್ದಾರ್ ತನುಜಾ

ನ್ಯಾಮತಿ.ಏ.೨೦;
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಯಾಮಾವಳಿಯನ್ನು ಸ್ವಯಂ ಸಾರ್ವಜನಿಕರೆ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ತನುಜಾ ಟಿ ಸವದತ್ತಿ ತಿಳಿಸಿದರು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ  ಪಟ್ಟಣದ ಜವಳಿ ವರ್ತಕರು, ಹೋಟೆಲ್ ಮಾಲೀಕರು, ಕಿರಾಣಿ ವರ್ತಕರ ಸಭೆಯಲ್ಲಿ ಕೋವಿಡ್ ಮುಂಜಾಗ್ರತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ 2ನೇ ಅಲೆಯ ರೂಪ ವಿಭಿನ್ನ ಆಗಿದ್ದು, ಸಾವಿನ ಸಂಖ್ಯೆ ಏರುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಿಬೇಕು, ಮಾಸ್ಕ್ ಧಾರಣೆ, ಅಂತರ ಕಾಪಾಡುವುದು ಸೇರಿದಂತೆ ಸಭೆ, ಧಾರ್ಮಿಕ ಸಮಾರಂಭಗಳಿಗೆ ಹೆಚ್ಚಿನ ಜನರ ನಿರ್ಬಂಧ ಕುರಿತಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು. ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ ಮಾತನಾಡಿ, ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ಅಂತರ ಕಾಪಾಡುವ ಗುರುತನ್ನು ಮಾಡಿಕೊಳ್ಳಬೇಕು, ಮಾಸ್ಕ್ ಧರಿಸುವಂತೆ ಸೂಚನಾ ಫಲಕ ಹಾಕಬೇಕು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸಂಬAಧಪಟ್ಟ ನೌಕರ ವರ್ಗದವರು ಮಾಸ್ಕ್ ಧರಿಸದಿದ್ದಲ್ಲಿ ರೂ. 250 ದಂಡ ಹಾಗೂ ಸಾರ್ವಜನಿಕರಿಗೆ ರೂ. 100 ದಂಡ ವಸೂಲು ಮಾಡಲು ಪೊಲೀಸರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ. ಗಣೇಶರಾವ, ಸಬ್‌ಇನ್ಸ್ಪೆಕ್ಟರ್ ಪಿ.ಎಸ್.ರಮೇಶ, ಎಸ್.ಬಿ.ಐ ವ್ಯವಸ್ಥಾಪಕ ಎಸ್. ಶರವಣ, ಆರೋಗ್ಯ ಇಲಾಖೆ ಎಂ.ಬಿ. ನಿಂಗಪ್ಪ, ಕೋಟೆಕೆರಿ ಮೇಘರಾಜ, ಜಗಳೂರು ಈಶ್ವರಪ್ಪ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಹಮ್ಮದ್‌ರಫಿ, ಎಸಿಡಿಪಿಒ ದೇನ್ಯಾನಾಯ್ಕ, ಸಿಆರ್‌ಪಿ ಮಹಾಂತೇಶ, ಎ.ಎಸ್.ಐಗಳಾದ ಎಂ.ಜಿ. ಚಂದ್ರು, ಸುರೇಶ, ಬಸವರಾಜಪ್ಪ, ರಜಾಕ್, ವಾರ್ಡ್ನ್ ಗುಂಡಪ್ಪ, ವಿಶ್ವನಾಥ, ಶಿರಸ್ತೆದಾರ ಸುರೇಶ, ಕಿರಣಕುಮಾರ, ಆಹಾರ ನಿರೀಕ್ಷಕ ವೇಣುಗೋಪಾಲ, ಅಂಗನವಾಡಿ ಮೇಲ್ವಿಚಾರಕಿ ಮಾಹೆಜಬೀನಾ ಫಿರಾಜಾದೆ ಇದ್ದರು. ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕಣ್ಗಾವಲು ಸಮಿತಿ ರಚಿಸಿದ್ದು ಅದರಲ್ಲಿ ನ್ಯಾಮತಿ ನಾಗರಾಜಪ್ಪ, ಮಹಮ್ಮದ್ ರಫಿ, ಎಂ.ಬಿ.ನಿಂಗಪ್ಪ, ಮಂಜುನಾಥ, ಮಹಾಂತೇಶ, ದೇನ್ಯಾನಾಯ್ಕ, ಎಂ.ಜೆ. ಚಂದ್ರು, ಸುರೇಶ, ಬಸವರಾಜಪ್ಪ, ರಜಾಕ್, ಗುಂಡಪ್ಪ, ವಿಶ್ವನಾಥ ಇದ್ದಾರೆ