ಕೋವಿಡ್ ತಡೆಗೆ ಕಟ್ಟುನಿಟ್ಟಿನ ಸೂಚನೆ

ಗದಗ,ಏ17: ಕೊರೊನ ಎರಡನೇ ಅಲೆಗೆ ಕಡಿವಾಣ ಹಾಕಲು ಗದಗ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ , ಕಾನ್ಫರನ್ಸ ಮೂಲಕ ತಾಲೂಕಾ ಹಾಗೂ ಜಿಲ್ಲಾ ವೈದ್ಯಾಧಿಕಾರಿ ಜೊತೆ ಚರ್ಚೆ ಮಾಡಲಾಗಿದ್ದು ಕೊರೊನಾ ಸೋಂಕು ತಡೆಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ,ಸಿ, ಪಾಟೀಲ್ ತಮ್ಮ ಗ್ರಹ ಕಚೇರಿಯಲ್ಲಿ ಪತ್ರಕರ್ತರಿಗೆ ವಿಷಯ ತಿಳಿಸಿದರು.
ಗದಗ ಜೀಮ್ಸ್ನಲ್ಲಿ 250 ಹಾಸಿಗೆಯ ತೀವ್ರ ನಿಗಾ ಘಟಕಗಳ ಲಭ್ಯತೆ ಇದೆ ತಾಲೂಕ ಆಸ್ಪತ್ರೆಗಳಲ್ಲಿ 491ಹಾಸಿಗೆಗಳ ಲಭ್ಯತೆ ಇದೆ 55 ವೆಂಟಿಲೇಟರ್ ಇವೆ ಎಂದು ಹೇಳಿದರು.
ಈಗಾಗಲೇ ಗದಗ ಜಿಲ್ಲೆಯಲ್ಲಿ 161 ಸಕ್ರಿಯ ಪ್ರಕರಣಗಳು ಇದ್ದು ಕೊರೊನ ಸೋಂಕು ಹೆಚ್ಚಾಗುವ ಎಲ್ಲ ಲಕ್ಷಣಗಳು ಇರುವದರಿಂದ ಸರಕಾರದ ಜೊತೆ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕತೆ ಇದೆ ಎಂದು ಹೇಳಿದರು.
2340 ಕೋವಿಶೀಲ್ದ 2930 ಕೋವಿಶೀಲ್ದ ಲಭ್ಯತೆ ಇದೆ 800 ಜನರಿಗೆ ಆಗುವಷ್ಟು ಔಷದಿ ಹಾಸಿಗೆ ಚಿಕಿತ್ಸೆ ಲಭ್ಯವಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವ್ಯಾಕ್ಸಿನ್ ಸುರಕ್ಷಿತವಾಗಿದೆ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಯೆ, ಎಮ್ ಹುಡೇದ ಎಮ್, ಎಸ್ ಪಾಟೀಲ್ ಉಪಸ್ಥಿತರಿದ್ದರು.