ಕೋವಿಡ್ ತಡೆಗಟ್ಟಲು ಚಳ್ಳಕೆರೆ ಶಾಸಕರಿಂದ ಸರಣಿ ಸಭೆ

ಚಳ್ಳಕೆರೆ.ಮೇ.೨;  ತಾಲೂಕಿನ ರಾಮಜೋಗಿಹಳ್ಳಿ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ  ಶಾಸಕ ಟಿ ರಘುಮೂರ್ತಿ ಸಭೆ ನಡೆಸಿದ್ದಾರೆ.ಕೋವಿಡ್ ನಿಯಂತ್ರಣಕ್ಕೆ ರಾಮಜೋಗಿಹಳ್ಳಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆಗೆದುಕೊಂಡಿರು ಮುಂಜಾಗ್ರತಾ ಕ್ರಮಗಳು ಕುರಿತಂತೆ ಚರ್ಚೆ ನಡೆಸಿಕೋವಿಡ್ ತಡೆಗಟ್ಟಲು ಎಚ್ಚರಿಕೆಯಿಂದ ಕಾರ್ಯನಿವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ‌ನೀಡಿದ  ಶಾಸಕರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವುದು. ತಾಲೂಕು ಹೊರಭಾಗದಿಂದ ಬರುವವರ ಬಗ್ಗೆ ಎಚ್ಚರಿಕೆ ಬಹಸುವುದು, ಹೊರಭಾಗದಿಂದ ಬರುವವರನ್ನು ಕ್ವಾರಂಟೈನ್ ಮಾಡುವುದು. ಸೇರಿದಂತೆ ಕೋವಿಡ್ ಸೋಂಕಿತರಿಗೆ ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇಂದ್ರಗಳಿಗೆ ದಾಖಲಿಸುವುದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಪ್ರಮುಖ ಜನಪತ್ರಿನಿಧಿಗಳು ಉಪಸ್ಥಿತರಿದ್ದರು.