ಕೋವಿಡ್ ತಡೆಗಟ್ಟಲು ಅಗತ್ಯ ಕ್ರಮ; ಜಿ.ಎಂ ಸಿದ್ದೇಶ್ವರ್

ಜಗಳೂರು:ಮೇ.೧೫; ಕೋವಿಡ್-19 ಹೆಚ್ಚಳವಾಗುತ್ತಿದ್ದು ತಡೆಗಟ್ಟಲು ಎಲ್ಲರೂ ಶಕ್ತಿ ಮೀರಿಕಾರ್ಯ ನಿರ್ವಹಿಸಬೇಕು ಬೆಡ್, ಆಕ್ಸಿಜನ್ ಸೇರಿದಂತೆ ಏನೇ ಸಮಸ್ಯೆ ಇದ್ದರೆ ನನಗೆ ಇಲ್ಲವೇ ಜಿಲ್ಲಾಧಿಕಾರಿಗಳಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ನುರಿತ ಟೆಕ್ನೇಷಿಯನ್‌ರು ಸೇರಿದಂತೆ ವೆಂಟಿಲೇಟ್‌ರ್‌ಗಳ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿನ ಬಗ್ಗೆ ಜಿಲ್ಲಾಧಿಕಾರಿಗಳು,ನಾವು ಹೆಚ್ಚಿನ ಶ್ರಮವಹಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು. ಶಾಸಕ ಎಸ್.ವಿ.ರಾಮಚಂದ್ರ ಕೋವಿಡ್‌ನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು, ಮರ‍್ನಾಲ್ಕು ದಿವಸದಲ್ಲಿ ಕ್ಷೇತ್ರಕ್ಕೆ ಬರಲಿದ್ದಾರೆ. ಯಾರು ಆತಂಕ ಪಡಬಾರದು. ಮನೆಯಲಿದ್ದರೂ ಸಹ ಅಧಿಕಾರಿಗಳೊಂದಿಗೆ, ನನ್ನೊಂದಿಗೆ, ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ಬಗ್ಗೆ ಚರ್ಚಿಸುತ್ತಿದ್ದಾರೆ.ಎಂದು ತಿಳಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಕೋವಿಡ್ ಜನರ ಮನೆ ತಪಾಸಣೆ ನಡೆಸಿ ಒಂದೇ ಕಡೆ ವಾಸ ಇದ್ದದ್ದು ಕಂಡು ಬಂದರೇ ತಕ್ಷಣವೇ ಅಂತಹವರನ್ನು ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿ ರೋಗ ಹರಡದಂತೆ ತಡೆಗಟ್ಟಬೇಕೆಂದು ಅಧಿಕಾರಿಗಳಿಗೆ, ಪೋಲೀಸ್ ಇಲಾಖೆಗೆ  ಸೂಚನೆ ನೀಡಿದರು. ಎಎನ್‌ಎಂ, ಆಶಾಕಾರ್ಯಕರ್ತರಿಗೆ ತಕ್ಷಣವೇ ಮಾಸ್ಕ್, ಸ್ಯಾನಿಟೇಜ್‌ರ್ ನೀಡುವಂತೆ ತಿಳಿಸಿದರು.ಜನರು ಜಾಗೃತರಾದರೆ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ. ಕೋವಿಡ್‌ದಾರರಿಗೆ ಬೆಡ್‌ಗಳ ವ್ಯವಸ್ಥೆ, ಆಕ್ಸಿಜನ್, ವೆಂಟಲೇಟರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಮರೋಪಾಧಿಯಲ್ಲಿ ಜಿಲ್ಲಾ,ತಾಲ್ಲೂಕು,ವೈದ್ಯರು, ಎಎನ್‌ಎಂ ಗಳು ಆಶಾಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದು, ರಾಜಕೀಯ ಪ್ರತಿನಿಧಿಗಳು ಸಹಕೆಲಸ ಮಾಡುತ್ತಿದ್ದಾರೆ. ಆದರೆ ನಾಗರೀಕರು ಕಾಯಿಲೆ ಗಂಭೀರವಾಗುವ ಮೊದಲೆ ಜ್ವರ, ಕೆಮ್ಮು, ಸುಸ್ತು ಕಂಡು ಬಂದ ತಕ್ಷಣವೇ ಕೋವಿಡ್ ಟೆಸ್ಟ ಮಾಡಿಸಿಕೊಳ್ಳಬೇಕು ಎಂದರು.ತಹಶಿಲ್ದಾರ್ ನಾಗವೇಣಿ ಮಾತನಾಡಿ ಇದುವರೆಗೆ 464 ಕೋವಿಡ್ ರೋಗಿಗಳು ಇದ್ದು, 207 ಜನ ಗುಣ ಮುಖರಾಗಿದ್ದಾರೆ. 257 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನರು ಮರಣ ಹೊಂದಿದ್ದಾರೆ.ಕೋವಿಡ್‌ಕೇರ್ ಸೆಂಟರ್‌ನಲ್ಲಿ 65 ಜನರಲ್ಲಿ 62 ಜನರು ಗುಣ ಮುಖರಾಗಿದ್ದು ,3 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 60 ಜನರಲ್ಲಿ 50 ಜನರು ಆಕ್ಸಿಜನ್‌ನಲ್ಲಿ, ಉಳಿದ 10 ಜನರೂ ಸಹ ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ತಾಲ್ಲೂಕು ಮುಖ್ಯ ಆಡಳಿತಾಧಿಕಾರಿ ಡಾ.ನೀರಜ್, ಆಸ್ಪತ್ರೆಯಕೋವಿಡ್ -19 ಬಗ್ಗೆ, ಆಕ್ಸಿಜನ್, ವೆಂಟಿಲೇರ್ ಸೇರಿದಂತೆ ಇತರೇ ಸೌಲಭ್ಯಗಳ ಕುಂದು ಕೊರತೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಪದೇಶಗಳ ಕೋವಿಡ್ ಬಗ್ಗೆ ಇಓ ಮಲ್ಲನಾಯ್ಕ್ ಸಭೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಜಯ್ ಮಾಂತೇಶ್‌ದಾನಮ್‌ವರು, ಡಿ.ಹೆಚ್.ಓ.ನಾಗರಾಜು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು