ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದರೂ ಅರ್ಧದಲ್ಲೇ ’ಮಿಶನ್ ಮಜ್ನೂ’ ಶೂಟಿಂಗ್ ತ್ಯಜಿಸಿದ ಸಿದ್ಧಾರ್ಥ ಮಲ್ಹೋತ್ರಾ

ಬಾಲಿವುಡ್ ನಲ್ಲಿ ನಿರಂತರವಾಗಿ ಕೊರೊನಾದ ಅಪಾಯ ಹೆಚ್ಚುತ್ತಲೇ ಇದೆ. ಕಳೆದ ಹಲವು ದಿನಗಳಿಂದ ಒಬ್ಬೊಬ್ಬರೇ ಕೊರೊನಾ ಪಾಸಿಟಿವ್ ಗೆ ಒಳಗಾಗುತ್ತಿರುವ ವರದಿಯನ್ನು ಇಂಡಸ್ಟ್ರಿಯವರು ನೀಡುತ್ತಿದ್ದಾರೆ.ಹಾಗೂ ಫಿಲ್ಮ್ ಶೂಟಿಂಗ್ ನ್ನು ಸ್ಥಗಿತ ಗೊಳಿಸುತ್ತಿದ್ದಾರೆ.


ಈತನಕ ಭೂಲ್ ಭೂಲೈಯಾ ೨ , ಅಮರೀಕೀ ಪಂಡಿತ್, ಜಾನ್ವಾರ್….. ಸಹಿತ ಹಲವಾರು ಫಿಲ್ಮ್ ಗಳ ಶೂಟಿಂಗ್ ಸ್ಥಗಿತಗೊಂಡಿದೆ.
ಇದೀಗ ಸಿದ್ಧಾರ್ಥ ಮಲ್ಹೋತ್ರಾ ಅವರು ’ಮಿಶನ್ ಮಜ್ನೂ’ ಫಿಲ್ಮ್ ನ ಶೂಟಿಂಗ್ ನಡುವೆಯೇ ತ್ಯಜಿಸಿ ಹೋಗಿದ್ದಾರೆ.
ಅನೇಕ ವಾರಗಳಿಂದ ಲಕ್ನೋ ಮತ್ತು ಪರಿಸರದ ಪ್ರದೇಶಗಳಲ್ಲಿ ಈ ಫಿಲ್ಮ್ ನ ಶೂಟಿಂಗ್ ನಡೆಯುತ್ತಿತ್ತು.
ಫಿಲ್ಮ್ ನ ಸೆಟ್ಟ್ ನಲ್ಲಿ ಉಪಸ್ಥಿತರಿದ್ದ ವಕ್ತಾರರು ಹೇಳುವಂತೆ ಶೂಟಿಂಗ್ ಸಂದರ್ಭದಲ್ಲಿ ಸಿದ್ಧಾರ್ಥ ಅವರ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ತಕ್ಷಣ ಅವರು ಕೊರೊನಾ ಟೆಸ್ಟ್ ಮಾಡಿಸಿದರು.ಆದರೆ ನೆಗೆಟಿವ್ ರಿಪೋರ್ಟು ಬಂದಿತ್ತು. ಆದರೂ ಭಯದಲ್ಲಿ ಫಿಲ್ಮ್ ನ ಶೂಟಿಂಗ್ ನ್ನು ಅರ್ಧದಲ್ಲೇ ತ್ಯಜಿಸಿ ಮುಂಬೈಗೆ ವಾಪಸ್ ಬಂದರು.
ವಿಶೇಷ ಅಂದರೆ ’ಗಂಗೂಬಾಯಿ ಕಾಠಿಯಾವಾಡಿ’ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರು ಪಾಸಿಟಿವ್ ಆದನಂತರವೂ ಆ ಫಿಲ್ಮ್ ನ ಶೂಟಿಂಗ್ ಮಾತ್ರ ನಿಂತಿರಲಿಲ್ಲ.
ಈಗ ಮಿಶನ್ ಮಜ್ನೂ ಫಿಲ್ಮ್ ನ ಪ್ರೊಡಕ್ಷನ್ ಟೀಮ್ ನ ಜನರು ಹೇಳುವಂತೆ ಲಕ್ನೋದ ನಂತರ ಒಂದು ದೃಶ್ಯ ಆಗ್ರಾದಲ್ಲಿ ಶೂಟಿಂಗ್ ಮಾಡುವುದಿತ್ತು. ಒಂದು ದೊಡ್ಡ ಆಕ್ಷನ್ ಸಿಕ್ವೆನ್ಸಿಂಗ್ ನ್ನು ಶೂಟ್ ಮಾಡುವುದಿತ್ತು. ಮಸ್ಜಿದ್ ಮತ್ತು ಟ್ರೈನ್ ನ ಬ್ಯಾಕ್ ಡ್ರಾಪ್ ನಲ್ಲಿ ಬಹಳ ದೊಡ್ಡ ಫೈಟ್ ಸೀಕ್ವೆನ್ಸ್ ಶೂಟಿಂಗ್ ಮಾಡುವುದಿತ್ತು. ಸುಮಾರು ೧೦೦– ೧೨೫ ಜೂನಿಯರ್ ಆರ್ಟಿಸ್ಟ್ ಗಳು ಅಸಿಸ್ಟೆಂಟ್ ಗಳ ಜೊತೆ ಈ ದೃಶ್ಯದ ಶೂಟಿಂಗ್ ಮಾಡುವುದಿತ್ತು. ಈಗ ಸೆಟ್ ನಲ್ಲಿ ಉಳಿದ ಕಲಾವಿದರು ಸಿದ್ಧಾರ್ಥ ಇಲ್ಲದೆಯೇ ಶೂಟಿಂಗ್ ಮುಂದುವರಿಸಿದ್ದಾರೆ. ಲಖ್ನೋದಲ್ಲಿ ಕೇವಲ ಹತ್ತು ದಿನಗಳ ಶೂಟಿಂಗ್ ಮಾತ್ರ ಬಾಕಿ ಇತ್ತು.

ಚಂದ್ರನನ್ನು ನೋಡಿದ ಪ್ರಿಯಾಂಕಾ ಸಿಂಗ್ ಗೆ ಅಣ್ಣ ಸುಶಾಂತ್ ನ ನೆನಪು ಉಕ್ಕಿ ಬಂತು

ಸುಶಾಂತ್ ಸಿಂಗ್ ರಾಜಪುತ್ ಸಾವಿನ ೯ ತಿಂಗಳ ನಂತರವೂ ಅವರ ಪರಿವಾರದವರು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮೊನ್ನೆ ದಿವಂಗತ ನಟ ಸುಶಾಂತ್ ಸಿಂಗ್ ರ ಸಹೋದರಿ ಪ್ರಿಯಾಂಕಾ ಸಿಂಗ್ ಹೋಳಿ ಹುಣ್ಣಿಮೆಯ ಚಂದ್ರನನ್ನು ನೋಡಿದಾಗ ಮತ್ತೆ ಸುಶಾಂತ್ ಸಿಂಗರ ನೆನಪು ಅವರಿಗೆ ಉಕ್ಕಿಬಂತು.


ಪ್ರಿಯಾಂಕಾ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಚಂದ್ರನ ಫೋಟೋವನ್ನು ಶೇರ್ ಮಾಡುತ್ತಾ ಬರೆದಿದ್ದಾರೆ—
“ಎಸ್ ಎಸ್ ಆರ್, ನಿಮ್ಮ ಜೊತೆ ಚಂದ್ರನನ್ನು ನೋಡುತ್ತಾ ಸದಾ ಆಶ್ಚರ್ಯಜನಕ ಮತ್ತು ಆನಂದ ಎರಡೂ ಉಂಟಾಗುತ್ತದೆ. ಸುಂದರ ವಸ್ತು ಯಾವಾಗಲೂ ಖುಷಿ ಕೊಡುತ್ತದೆ, ನೋವನ್ನು ಕಡಿಮೆ ಮಾಡುತ್ತದೆ. ಸಿಬಿಐ ತನಿಖೆಯಲ್ಲಿ ನನಗೆ ವಿಶ್ವಾಸ ಇದೆ. ಬಹಳಷ್ಟು ಕುತೂಹಲದಿಂದ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇನೆ” ಎಂದಿದ್ದಾರೆ. ೧೪ ಜೂನ್ ೨೦೨೦ಕ್ಕೆ ಸುಶಾಂತ್ ಸಿಂಗ್ ಮುಂಬೈಯ ತಮ್ಮ ಮನೆಯಲ್ಲಿ ಶವವಾಗಿ ಕಂಡುಬಂದಿದ್ದರು. ಸಿಬಿಐ ಈ ಸಾವಿನ ತನಿಖೆಯನ್ನು ಮಾಡುತ್ತಿದೆ . ಸುಶಾಂತ್ ಸಿಂಗ್ ಅವರು ನಿಜವಾಗಿಯೂ ಆತ್ಮಹತ್ಯೆ ಮಾಡಿದ್ದಾರೆಯೋ ಅಥವಾ ಕೊಲೆಯೋ ಎನ್ನುವುದರ ಅಂತಿಮ ತೀರ್ಪು ಇನ್ನೂ ಬಂದಿಲ್ಲ.

ಅಮಿತಾಭ್ – ಇಮ್ರಾನ್ ಅಭಿನಯದ ಫಿಲ್ಮ್ ’ಚೆಹರೆ’ ಎಪ್ರಿಲ್ ೯ ರಂದು ಬಿಡುಗಡೆ ಇಲ್ಲವಂತೆ

ಕೊರೊನಾ ವೈರಸ್ ನ ಎರಡನೇ ಅಲೆಯ ವಿಜ್ರಂಭಣೆಯ ಕಾರಣ ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಾಶ್ಮಿಯವರ ಅಭಿನಯದ ’ಚೆಹರೆ’ ಫಿಲ್ಮ್ ಏಪ್ರಿಲ್ ೯ರಂದು ಬಿಡುಗಡೆಯಾಗುವುದಿಲ್ಲವಂತೆ.


ಈ ಫಿಲ್ಮ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ನಟಿ ಕ್ರಿಸ್ಟಲ್ ಡಿಸೋಜ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ರೂಮೀ ಜಾಫರೀ ನಿರ್ದೇಶನದಲ್ಲಿ ತಯಾರಾಗಿರುವ ಈ ಪಿಲ್ಮ್ ನ ಹೊಸ ರಿಲೀಸ್ ಡೇಟ್ ಕೋವಿಡ್ ನ ಮುಂದಿನ ಪರಿಸ್ಥಿತಿಯನ್ನು ಗಮನಿಸಿ ಘೋಷಿಸಲಾಗುವುದು.


’ಹಾಥಿ ಮೇರೆ ಸಾಥಿ’, ಮತ್ತು ’ಬಂಟಿ ಔರ್ ಬಬ್ಲಿ ೨ ’ ಫಿಲ್ಮ್ ನ ನಂತರ ಇದೀಗ ’ಚೆಹರೆ’ ಫಿಲ್ಮ್ ಕೊರೊನಾ ಕಾರಣ ಎರಡನೇ ಬಾರಿ ಮುಂದೂಡಲ್ಪಟ್ಟ ಫಿಲ್ಮ್ ಆಗಿದೆ.
ಕಳೆದ ವರ್ಷವೂ ಕೊರೊನಾ ಕಾರಣ ಈ ಮೂರೂ ಫಿಲ್ಮ್ ಗಳು ಸಿನಿಮಾ ಟಾಕೀಸುಗಳಲ್ಲಿ ಬಿಡುಗಡೆಯಾಗಿರಲಿಲ್ಲ.