ಕೋವಿಡ್ ಜಾಗೃತಿ ಮೂಡಿಸಿದ ಯಾಕಾಪೂರ

ಕಾಳಗಿ. ಏ.26 : ಕೊರೋನಾ ವೈರಸ್ 2 ನೇ ರೂಪಾಂತರ ಅಲೆ ಹಿನ್ನೆಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ಜನತೆಗೆ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು, ಅನಾವಶ್ಯಕ ತಿರುಗಾಟ ಬೇಡ, ಮದುವೆ ಇನ್ನಿತರ ಸಭೆ ಸಮಾರಂಭಗಳಿಂದ ದೂರವಿರಿ, ಸರಕಾರದ ಮಾರ್ಗಸೂಚಿ ಸಾರ್ವಜನಿಕರಿಗೆ ತಿಳಿಹೇಳೋಣ, ಜಾಗೃತಿ ಮೂಡಿಸೋಣ ಕೊರೋನಾ ಮಹಾಮಾರಿ ರೋಗವನ್ನು ತಡೆಯೋಣ ಎಂದು ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಜೆಡಿಎಸ್ ಹಿರಿಯ ಮುಖಂಡರಾದ ಸಂಜೀವನ ಯಾಕಪೂರ ಮನವಿ ಮಾಡಿದರು.