ಕೋವಿಡ್ ಜಾಗೃತಿ ನಿಮಿತ್ತ ಸೈಕಲ್ ಜಾಥಾ

ಬಳ್ಳಾರಿ, ಜೂ.09 : ಕೋವಿಡ್ ಜಾಗೃತಿ ಅಭಿಯಾನ ನಿಮಿತ್ತ ನಗರದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಸೈಕಲ್ ಜಾಥಾ ನಡೆಯಿತು.
ಈ ಜಾಥಾದಲ್ಲಿ ಸುಮಾರು ಸರ್ವ್ ವಾಲೇಂಟಿಯರ್ಸ್ ಮತ್ತು ಅಭಯ ಫೌಂಡೇಷನ್ ನೇತೃತ್ವದ ಸದಸ್ಯರು ಭಾಗವಹಿಸಿದ್ದರು.
ಈ ಜಾಥಾವು ಗೃಹರಕ್ಷಕದಳ ಕಛೇರಿಯಿಂದ ಪ್ರಾರಂಭಗೊಂಡು ಮೋತಿ ವೃತ್ತ, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ, ಹೊಸ ಬಸ್‍ನಿಲ್ದಾಣ ಮೂಲಕ ಮೋತಿ ವೃತ್ತದ ಮಾರ್ಗವಾಗಿ ಎಸ್.ಪಿ.ವೃತ್ತದವರೆಗೆ ನಡೆಯಿತು.
ಜಾಥಾದ ಸದಸ್ಯರು ನಗರದ ವಿವಿಧ ಮುಖ್ಯ ವೃತ್ತದಲ್ಲಿ ಜನರಿಗೆ ಸಾಮಾಜಿಕ ಅಂತರ ಕಾಪಾಡುವುದು, ಕೈ ಸ್ವಚ್ಛತೆಯನ್ನು ಮಾಡುವುದು ಮತ್ತು ಸ್ಯಾನಿಟೈಜರ್ ಬಳಸಿ ಕೋವಿಡ್ ವೈರಾಣುವನ್ನು ನಾಶಮಾಡಲು ವಿವಿಧ ರೀತಿಯಿಂದ ತಿಳಿಸಿಕೊಟ್ಟರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಸದಸ್ಯರಾದ ಹರಿಶಂಕರ್, ಅಶೋಕ್ ಜೇನ್, ದಿವಾಕರ್,ಶಿವ ಸಾಗರ್, ಪ.ವಿಶ್ನಿ ಕುಮಾರ್, ಮಹಬೂಬ್ ಬಾಷಾ ಮತ್ತು ಅಭಯ ಫೌಂಡೇಷನ್‍ನ ರಾಮಕೃಷ್ಣ ರೇನುಗುಂಡ್ಲ ಹಾಗೂ ತಂಡದವರು ಭಾಗವಹಿಸಿದ್ದರು.