ಕೋವಿಡ್ ಜಾಗೃತಿ ಜಾಥಾ


ಗದಗ, ಡಿ1 : ಗದಗ ಜಿಲ್ಲೆಯ ಜಿ.ಎಚ್.ಎಸ್. ಎಸ್.ಎಮ್.ಕೆ. ನಗರದ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುನಿಸೆಫ್, ಶಿಕ್ಷಣ ಇಲಾಖೆಯ ಹಾಗೂ ಎನ್.ಎಸ್.ಎಸ್. ಸಹಯೋಗದೊಂದಿಗೆ ಮಂಗಳವಾರ ಕೋವಿಡ್-19 ನಿಯಂತ್ರಣ ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಬಗ್ಗೆ ಜಾಥಾ ಕಾರ್ಯಕ್ರಮ ಏರ್ಪಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜನಾಧಿಕಾರಿ ಡಾ. ಸತ್ಯೇಂದ್ರಕುಮಾರ , ಎಸ್.ಬಿ.ಸಿ.ಸಿ. ಸಂಯೋಜಕರಾದ ಜಾಹೀರ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಶಾಲಾ ಮುಖ್ಯೋಪಾಧ್ಯಾಯರಾದ ವಿವೇಕಾನಂದಗೌಡ ಪಾಟೀಲ, ಎಮ್. ಬಿ. ಕಿತ್ತೂರ, ಎ. ಆರ್. ಜ್ಯೋತಿ ಶೆಟ್ಟರ, ಎಫ್. ಬಿ. ಸುಂಕದ, ನಾಗರಳ್ಳಿ, ಡಿ. ಎಸ್. ಮದಳಿಕೇರಿ ಸಹ ಶಿಕ್ಷಕರು, ಎಮ್.ಬಿ.ಚುಂಚಾ ದೈಹಿಕ ಶಿಕ್ಷಕರು ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.