ಕೋವಿಡ್ ಜಾಗೃತಿ ಕಾರ್ಯಕ್ರಮ

ಔರಾದ :ಮೇ.21: ಪಟ್ಟಣ ಹಾಗೂ ತಾಲೂಕಿನಾದ್ಯಂತ ಸತತ 15 ದಿನಗಳಿಂದ ಅರುಣೋದಯ ಶಿಕ್ಷಣ ಸಂಸ್ಥೆ ಔರಾದ, ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಔರಾದ, ಬಂಟಿ ದರ್ಬಾರೆ ಗೆಳೆಯರ ಬಳಗ ಔರಾದ ವತಿಯಿಂದ ಕಣ್ಣಿಗೂ ಕಾಣದ ಕೈಗೂ ಸಿಗದ ಕೋರೋನ ಮಹಾಮಾರಿಯನ್ನು ತಡೆಗಟ್ಟಳು ತಾಲೂಕಿನಾದ್ಯಂತ ಕೋವಿಡ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರತಿ ದಿನ ಒಂದೊಂದು ಹಳ್ಳಿಗಳಿಗೆ ತೆರಳಿ ಕೋವಿಡ್ 19 ಕುರಿತು ಜನರಲ್ಲಿ ಜಾಗೃತಿ ಜೊತೆಗೆ ಕೋವಿಡ್ ಲಸಿಕೆ ಪಡೆಯಲು ಮನವಿಯನ್ನು ಮಾಡಿಕೊಳ್ಳಲಾಯಿತು.

ಔರಾದ ಪಟ್ಟಣದ ಆಹಾರ ಸರಬರಾಜು ಇಲಾಖೆಯಲ್ಲಿ ಲಾಕಡೌನ್ ಸಂದರ್ಭದಲ್ಲೂ ಕೂಡ ನಿಸ್ವಾರ್ಥವಾಗಿ ತನ್ನ ಜೀವದ ಹಂಗು ತೊರೆದು ತಾಲೂಕಿನ ಪ್ರತಿಯೊಂದು ನ್ಯಾಯ ಬೆಲೆ ಅಂಗಡಿ ಹಾಗೂ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುತ್ತಿರುವ ಕಾರ್ಮಿಕರಿಗೆ ಪಟ್ಟಣ ಪಂಚಾಯತ ಸದ್ಯಸರಾದ ಬಂಟಿ ದರ್ಬಾರೆ ಅವರು ಮಾಸ್ಕ ಹಾಗೂ ಸ್ಯಾನಿಟೈಜರ ವಿತರಿಸಿ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ರತ್ನದೀಪ ಕಸ್ತೂರೆ, ಸುದೀಪ ದರ್ಬಾರೆ, ಕಾರ್ತಿಕ್ ರಾಜಪುತ, ಕಪಿಲ್,ಸಂತೋಷ ಉಜನಿ, ಉಪಸ್ಥಿತರಿದ್ದರು