ಕೋವಿಡ್ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಭೇಟಿ

ರಾಯಚೂರು.ಏ.೨೯- ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ರಾಯಚೂರು ನಗರದ ಬಾಲಂಕೂ ಹಾಗೂ ಶಿವಂ ಆಸ್ಪತ್ರೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಏ.೨೮ರ ಬುಧವಾರ ದಿಢೀರ್ ಭೇಟಿ ನೀಡಿ, ಅಲ್ಲಿನ ಚಿಕಿತ್ಸಾ ವಿಧಾನ, ಸ್ಥಿತಿ-Uತಿಗಳ ಕುರಿತು ಪರಿಶೀಲಿಸಿದರು.
ಎರಡೂ ಆಸ್ಪತ್ರೆಗಳ ಎಲ್ಲಾ ವಿಭಾಗಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ಕೋವಿಡ್ ಚಿಕಿತ್ಸೆ ನೀಡುತ್ತಿರುವ ಐಸಿಯು, ಜನರಲ್, ಆಕ್ಸಿಜನ್ ಬೆಡ್ ವಾರ್ಡ್‌ಗಳನ್ನು ಪರಿಶೀಲಿಸಿದರು. ನಂತರ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸವಿವರ ಮಾಹಿತಿ ಪಡೆದರು.
ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಯಾವ ರೋಗಿಗಳಿಗೆ ನೀಡಲಾಗಿದೆ ಎಂಬ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ಸಂಬಂಧಿಸಿದ ದಾಖಲಾತಿಯನ್ನು ಪರಿಶೀಲಿಸಿದರು. ಆಕ್ಸಿಜನ್ ಪೂರೈಕೆ ಕುರಿತು ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಬಾಲಂಕೂ ಆಸ್ಪತ್ರೆಯ ಮುಖ್ಯಸ್ಥ ಡಾ. ಶ್ರೀಧರ್, ಶಿವಂ ಆಸ್ಪತ್ರೆಯ ಮುಖ್ಯಸ್ಥ ಎಸ್.ಎಸ್. ರೆಡ್ಡಿ ಇದ್ದರು.