ಕೋವಿಡ್ ಚಿಕಿತ್ಸೆ : ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳ ನೇಮಕ

Novel coronavirus 2019 nCoV pcr diagnostics kit. This is RT-PCR kit to detect presence of 2019-nCoV or covid19 virus in clinical specimens. In vitro diagnostic test based on real-time PCR technology

ಮಂಗಳೂರು, ಎ.೩೦- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -೧೯ ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಕಾಲಕಾಲಕ್ಕೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಖಚಿತ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ಖಚಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಬೆಡ್‌ಗಳ ಕೊರತೆ ಉಂಟಾಗುವ ಸಂಭವವಿರುವುದರಿಂದ ಮುಂಜಾಗೃತಾ ದೃಷ್ಟಿಯಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು ಬೆಡ್‌ಗಳ ಪೈಕಿ ಶೇಕಡಾ ೫೦% ರಷ್ಟು ಹಾಗೂ ಖಾಸಗಿ ವೈದ್ಯಕೀಯ ಅಸ್ಪತ್ರೆಗಳಲ್ಲಿ ಶೇಕಡಾ ೭೫% ರಷ್ಟು ಬೆಡ್‌ಗಳನ್ನು ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಲಾಗಿರುತ್ತದೆ.
ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಹಾಗೂ ಮೂಲ ಸೌಕರ್ಯಗಳನ್ನು ಪೂರೈಸುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಕೋವಿಡ್ -೧೯ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳ ಕಾಣಿಸಿರುವ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್‌ಗೆ ಪರಿಸರ ಅಧಿಕಾರಿ
ಕೀರ್ತಿ ಕುಮಾರ್ ಮೊ.ನಂ: ೯೪೪೮೨೬೮೧೭೧, ಹಂಪನಕಟ್ಟೆಯ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ಗೆ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಮೊ.ನಂ: ೬೩೬೬೯೪೪೦೭೯, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಮೊ.ನಂ:೬೩೬೬೯೪೪೦೮೯, ದೇರಳಕಟ್ಟೆಯ ಕೆ ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವೇಣುಗೋಪಾಲ್ ಮೊ.ನಂ:೯೪೮೦೮೬೨೦೧೨ ಹಾಗೂ ಯೆನೆಪೊಯಾ ಮೆಡಿಕಲ್ ಕಾಲೇಜ್‌ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮೊ.ನಂ: ೬೩೬೬೯೪೪೦೫೩, ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜ್‌ಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್ ಮೊ.ನಂ: ೯೬೦೬೩ ೧೩೨೫೯, ಎ.ಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತ ಮೊ.ನಂ: ೬೩೬೬೯೪೪೦೯೫. ಎಜೆ ಸೂಪರ್ ಸ್ಪೆ?ಲಿಟಿ ಅಸ್ಪತ್ರೆ ಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉಪ ನಿರ್ದೇಶಕ ಮಂಜುನಾಥ ಹೆಗ್ಡೆ ಮೊ.ನಂ: ೬೩೬೬೯೪೪೦೯೦,
ಅತ್ತಾವರದ ಕೆ.ಎಂ.ಸಿ ಆಸ್ಪತ್ರೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಯಶವಂತ್ ಕುಮಾರ್ ಎಸ್ ಮೊ.ನಂ: ೯೪೮೩೬೧೪೩೫೪, ಕೊಡಿಯಾಲ್ ಬೈಲ್ ನ ಯೆನೆಪೊ?ಯಾ ಸ್ಪೆ?ಲಿಟಿ ಆಸ್ಪತ್ರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಸಚಿನ್ ಕುಮಾರ್
ಮೊ.ನಂ: ೯೯೬೪೪೨೭೬೦೩, ಅಥೆನಾ ಆಸ್ಪತ್ರೆಗೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಮೊ.ನಂ:೯೪೪೮೨೬೨೫೭೬ ಆಗಿರುತ್ತದೆ.
ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆ ಗೆ ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಎಲ್ ಪೂಜಾರ್
ಮೊ.ನಂ: ೬೩೬೬೯೪೪೦೯೮, ಕೊಲಾಸೋ ಆಸ್ಪತ್ರೆಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹೇಶ್ ಕುಮಾರ್ ಮೊ.ನಂ: ೬೩೬೬೯೪೪೦೬೮, ಪಂಪ್ ವೆಲ್‌ನ ಇಂಡಿಯಾನಾ ಆಸ್ಪತೆಗೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್ ಆರ್ ನಾಯಕ್
ಮೊ.ನಂ: ೯೫೯೧೪೧೭೨೧೮, ಹೈಲ್ಯಾಂಡ್ ಅಸ್ಪತ್ರೆ ಸಂಶೋಧನೆ ಹಾಗೂ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಸನ್ನ ಮೊ.ನಂ: ೯೪೪೮೬೯೬೬೨೧/೯೬೮೬೪೩೦೭೬೨, ಮಂಗಳೂರು ನಸಿರ್ಂಗ್ ಹೋಂ ಗೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಮೊ.ನಂ: ೯೪೪೯೦೧೭೩೨೪, ಬೆಂದೂರ‍್ನ ಎಸ್.ಸಿ. ಎಸ್ ಆಸ್ಪತ್ರೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಹಾಬಲೇಶ್ವರ್ ನಾಯಕ್ ಮೊ.ನಂ: ೯೪೪೯೦೮೦೧೫೦, ಮಂಗಳಾ ಕಿಡ್ನಿ ಫೌಂಡೇಶನ್ ಗೆ ತೂಕ ಮತ್ತು ಅಳತೆ ಇಲಾಖೆಯ ಉಪ ನಿರ್ದೇಶಕ ಕುಲಕರಣಿ ಮೊ.ನಂ: ೯೯೦೦೧೯೯೯೧೭, ಯುನಿಟಿ ಅಸ್ಪತ್ರೆಗೆ ಅಂತರ್ಜಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಜಾನಕಿ ಮೊ.ನಂ: ೯೪೪೮೮೯೫೦೮೬, ತಾರಾ ಆಸ್ಪತ್ರೆಗೆ ಸೈನಿಕರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ಅರ್ ಶೆಟ್ಟಿ ಮೊನಂ: ೬೩೬೬೯೪೪೦೮೭, ತೊಕ್ಕೊಟ್ಟು ನ ಸಹಾರ ಆಸ್ಪತ್ರೆಗೆ ಮೀನುಗಾರಿಕಾ ಇಲಾಖೆಯ ಸಹಾಯಕ ಉಪ ನಿರ್ದೇಶಕಿ ಸುಶ್ಮಿತ ರಾವ್ ಮೊ.ನಂ: ೯೪೪೯೦೨೫೬೮೦, ಉಳ್ಳಾಲ ಸಹಾರ ಆಸ್ಪತ್ರೆಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಸಂತ್ ರಾಜ್ ಶೆಟ್ಟಿ ಮೊ.ನಂ: ೯೮೪೫೨೪೨೧೨೦ ರವರನ್ನು ನೇಮಿಸಲಾಗಿದೆ.
ಸಿಟಿ ಆಸ್ಪತ್ರೆ ಸಂಶೋಧನೆ ಮತ್ತು ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಜಿ, ಮೊ.ನಂ:೮೮೬೧೬೩೨೦೩೦, ಇಂದಿರಾ ಆಸ್ಪತೆಗೆ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಡಾ| ರಾಘವೇಂದ್ರ ಕೆವಿ ಮೊ.ನಂ: ೯೮೪೫೪೪೪೭೬೫, ವಿನಯಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದಕ್ಕೆ ಕೆ.ಎಂ.ಡಿ.ಸಿ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಫಾರೂಕ್ ಮೊ.ನಂ: ೯೭೪೨೯೭೨೬೭೯, ವಿಜಯಾ ಕ್ಲಿನಿಕ್ ಜನರಲ್ ಆಸ್ಪತ್ರೆಗೆ ವಯಸ್ಕರ ಶಿಕ್ಷಣ ಅಧಿಕಾರಿ ಕೆ ಸುಧಾಕರ‍್ಮೊ.ನಂ: ೯೪೪೯೪೮೮೮೩೬ ರವರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.