ಕೋವಿಡ್ ಗೆ ಮದಿರೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಬಲಿ

ಬಳ್ಳಾರಿ ಮೇ 26 : ಸೋಂಕಿನಿಂದ ಬಂದವ ಬದುಕಿದ, ಆತನಿಂದ ಸೋಂಕು ತಗಲಿಸಿಕೊಂಡ ಮನೆಯ ಮೂವರು ಸತ್ತರು. ಇಂತಹ ಘಟನೆಯೊಂದು
ಜಿಲ್ಲೆಯ ‌ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ನಡೆದಿದೆ.

ಮಹಾಮಾರಿ ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು
ಬಲಿಯಾಗಿದ್ದಾರೆ.
ಪತ್ನಿ ಸುನೀತಮ್ಮ (45), ಪತಿ ರುದ್ರಪ್ಪ (56) ಹಾಗೂ ಮಗಳು ನಂದಿನಿ (18) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದವರಾಗಿದ್ದಾರೆ.

ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22) ಗುಣಮುಖ‌ರಾಗಿದ್ದಾರೆ.

ಘಟನೆಯ ವಿವರ: ಹೈದರಾಬಾದ್​ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22) ಕರೋನಾ ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಾದ ಆರಂಭದಲ್ಲೇ ಗ್ರಾಮಕ್ಕೆ ಆಗಮಿಸಿದ.

ಆತನಿಗೆ ಕೋವಿಡ್ ಸೋಂಕು ತಗುಲಿತ್ತು. ಹೋಂ ಐಸೋಲೇಷನ್​ನಲ್ಲಿದ್ದ ಆತನಿಂದ ತಾಯಿ ಸುನೀತಮ್ಮಗೆ ಈ ಸೋಂಕು ಆವರಿಸಿತ್ತು. ನಂತರ ಸಹೋದರಿ‌ ನಂದಿನಿ ಅವರಿಗೆ ಈ ಸೋಂಕು ಬಂದು‌ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರು ಸಾವನ್ನಪ್ಪಿದ್ದರು.
ಪತ್ನಿ ಹಾಗೂ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಿಪ್ಪೇಸ್ವಾಮಿಯವರ ತಂದೆ ರುದ್ರಪ್ಪ ಅವರಿಗೂ ಕೋವಿಡ್ ಸೋಂಕು ಬಂದು.‌ಜಿಲ್ಲೆಯ ಕಂಪ್ಲಿಯ ಖಾಸಗಿ ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದರು ಆದರೆ ಅವರು ಸಹ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೀಗ‌ ಮನೆಯಲ್ಲಿ ಸೂತಕ ಆವರಿಸಿದೆ. ಒಂದೇ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದನ್ನು ಕಂಡು ಗ್ರಾಮದ ಜನರು ಮಮ್ಮಲ ಮರುಗುತ್ತಿದ್ದಾರೆ